ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ದಿನಗಳ ಸೂಚ್ಯಂಕ ಓಟಕ್ಕೆ ತೆರೆ

Last Updated 4 ಡಿಸೆಂಬರ್ 2018, 18:32 IST
ಅಕ್ಷರ ಗಾತ್ರ

ಮುಂಬೈ: ಷೇರುಪೇಟೆಯ ಪ್ರಮುಖ ಷೇರುಗಳ ಆರು ವಹಿವಾಟಿನ ದಿನಗಳಲ್ಲಿನ ಗಳಿಕೆಗೆ ಮಂಗಳವಾರ ತೆರೆ ಬಿದ್ದಿತು.

ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕುಸಿತ, ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ದುರ್ಬಲ ವಹಿವಾಟು ಹೂಡಿಕೆದಾರರ ಖರೀದಿ ಉತ್ಸಾಹ ಕುಂದಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬುಧವಾರ ಪ್ರಕಟಿಸಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ, ಅಮೆರಿಕ ಹಾಗೂ ಚೀನಾ ನಡುವಣ ವಾಣಿಜ್ಯ ಸಮರದ ಕದನ ವಿರಾಮದ ಅನಿಶ್ಚಿತತೆಯು ವಹಿವಾಟುದಾರರು ಎಚ್ಚರಿಕೆಯ ಧೋರಣೆ ತಳೆಯುವಂತೆ ಮಾಡಿದೆ.

ಖರೀದಿ ಆಸಕ್ತಿ ಇಲ್ಲದ ಕಾರಣಕ್ಕೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 107 ಅಂಶಗಳಷ್ಟು ಕುಸಿತ ಕಂಡು 36,134 ಅಂಶಗಳಿಗೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ‘ನಿಫ್ಟಿ’ 14.25 ಅಂಶಗಳ ಇಳಿಕೆ ಕಂಡು, 10,869 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು.

ಸತತ ಎರಡನೆ ದಿನವೂ ಸನ್‌ ಫಾರ್ಮಾ ಷೇರಿನ ಬೆಲೆ ಗಮನಾರ್ಹ ನಷ್ಟ ಕಂಡಿತು.ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಸಂಸ್ಥೆಯ ವಿರುದ್ಧದ ‘ಒಳಗಿನವರ ವಹಿವಾಟು’ ಆರೋಪದ ಮರು ವಿಚಾರಣೆ ನಡೆಸುವ ಸಾಧ್ಯತೆಯು ವ್ಯತಿರಿಕ್ತ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT