ರೂಪಾಯಿ ಮೌಲ್ಯ ಕುಸಿತದ ಪರಿಣಾಮ: ಮುಂದುವರಿದ ನಕಾರಾತ್ಮಕ ವಹಿವಾಟು

7
ವಾಣಿಜ್ಯ ಸಮರ

ರೂಪಾಯಿ ಮೌಲ್ಯ ಕುಸಿತದ ಪರಿಣಾಮ: ಮುಂದುವರಿದ ನಕಾರಾತ್ಮಕ ವಹಿವಾಟು

Published:
Updated:

ಮುಂಬೈ: ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಸತತ ಎರಡನೇ ವಾರದಲ್ಲಿಯೂ ದೇಶದ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿವೆ.

ನಾಲ್ಕು ದಿನಗಳ ವಾರದ ವಹಿವಾಟು ಚಂಚಲವಾಗಿತ್ತು. ಸೋಮವಾರ ಮತ್ತು ಮಂಗಳವಾರ ಸೂಚ್ಯಂಕಗಳು ಹೆಚ್ಚಿನ ಇಳಿಕೆ ಕಂಡರೆ, ಬುಧವಾರ ಮತ್ತು ಶುಕ್ರವಾರ ಉತ್ತಮ ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 299 ಅಂಶ ಇಳಿಕೆಯಾಗಿ 38,090 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 74 ಅಂಶ ಇಳಿಕೆ ಕಂಡು 11,515 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಅಲ್ಲದೆ, ಅಮೆರಿಕದ ಫೆಡರಲ್ ರಿಸರ್ವ್‌ ಈ ತಿಂಗಳು ಬಡ್ಡಿದರಗಳಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ.  ಇದರಿಂದ ವಿದೇಶಿ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವೂ ಇಳಿಮುಖ ವಹಿವಾಟಿಗೆ ಕಾರಣವಾಗಿದೆ. ಆದರೆ ಶುಕ್ರವಾರ ರೂಪಾಯಿ ಮೌಲ್ಯ 37 ಪೈಸೆ ವೃದ್ಧಿಯಾಗಿದೆ. ಇದರ ಜತೆಗೆ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಇಳಿಕೆ, ಕೈಗಾರಿಕಾ ಸೂಚ್ಯಂಕದ ಏರಿಕೆಯು ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯವಾಗುವಂತೆ ಮಾಡಿವೆ.

ಆರ್ಥಿಕ ಪುನಶ್ಚೇತನಕ್ಕೆ ಪಂಚ ಸೂತ್ರ: ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ರಫ್ತು ಉತ್ತೇಜನ, ಅನಗತ್ಯ ವಸ್ತುಗಳ ಆಮದು ನಿಯಂತ್ರಣವನ್ನೂ ಒಳಗೊಂಡು ‘ಪಂಚ ಸೂತ್ರ’ಗಳನ್ನು ಪ್ರಕಟಿಸಿದೆ. ಈ ಸುದ್ದಿಯೂ ಸೂಚ್ಯಂಕದ ಏರಿಕೆಗೆ ನೆರವಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !