₹ ಕುಸಿತಕ್ಕೆ ಸೂಚ್ಯಂಕ ಇಳಿಕೆ

7

₹ ಕುಸಿತಕ್ಕೆ ಸೂಚ್ಯಂಕ ಇಳಿಕೆ

Published:
Updated:

ಮುಂಬೈ: ರೂಪಾಯಿ ವಿನಿಮಯ ಮೌಲ್ಯ ಕುಸಿತ ಮತ್ತು ಟರ್ಕಿಯಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ಗುರುವಾರ ಇಳಿಮುಖ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 189 ಅಂಶ ಇಳಿಕೆಯಾಗಿ 37,663 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 50 ಅಂಶ ಇಳಿಕೆ ಕಂಡು 11,385ರಲ್ಲಿ ವಹಿವಾಟು ಅಂತ್ಯಕಂಡಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯವು, ವಿನಿಮಯ ಮಾರುಕಟ್ಟೆಯ ವಹಿವಾಟಿನ ಒಂದು ಹಂತದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 70.40ಕ್ಕೆ ಕುಸಿದಿತ್ತು. ಇದರ ಜತೆಗೆ ವಿದೇಶಿ ಬಂಡವಾಳ ಹೊರಹರಿವು ಸೂಚ್ಯಂಕದ ಇಳಿಕೆಗೆ ಕಾರಣವಾಗಿವೆ.

ಜುಲೈ ತಿಂಗಳ ವ್ಯಾಪಾರ ಕೊರತೆ ಅಂತರವು ಐದು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ಸುದ್ದಿಯಿಂದಾಗಿ ಷೇರುಪೇಟೆ ವಹಿವಾಟು ನಕಾರಾತ್ಮಕ ಮಟ್ಟಕ್ಕೆ ತಿರುಗಿತು ಎಂದು ತಜ್ಞರು ಹೇಳಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಇಳಿಕೆಯಾದರೆ, ಯುರೋಪಿನ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿವೆ.

₹71.15ಕ್ಕೆ ಕುಸಿತ
ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರದ ವಹಿವಾಟಿನಲ್ಲಿ 26 ಪೈಸೆಯಷ್ಟು ಇಳಿಕೆಯಾಗಿ  70.15ರಲ್ಲಿ ವಹಿವಾಟು ಅಂತ್ಯವಾಗಿದೆ.

ವಹಿವಾಟಿನ ಒಂದು ಹಂತದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 70.40ಕ್ಕೆ ಕುಸಿದಿತ್ತು. ಆರ್‌ಬಿಐ ಮಧ್ಯಪ್ರವೇಶ ಮಾಡಿದ್ದರ ಫಲವಾಗಿ ಮತ್ತೆ ಚೇತರಿಕೆ ಕಂಡಿತು ಎಂದು ವರ್ತಕರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !