ಆಗಸ್ಟ್‌ 8ಕ್ಕೆ ಗ್ರಾಮೀಣ ಕೂಟದ ‘ಐಪಿಒ’

7

ಆಗಸ್ಟ್‌ 8ಕ್ಕೆ ಗ್ರಾಮೀಣ ಕೂಟದ ‘ಐಪಿಒ’

Published:
Updated:

ಬೆಂಗಳೂರು: ಹಣಕಾಸು ಸೇವಾ ಸಂಸ್ಥೆ ಕ್ರೆಡಿಟ್‌ ಅಕ್ಸೆಸ್‌ ಗ್ರಾಮೀಣ ಲಿಮಿಟೆಡ್‌ (ಗ್ರಾಮೀಣ ಕೂಟ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಆಗಸ್ಟ್‌ 8ರಂದು ಷೇರುಪೇಟೆ ಪ್ರವೇಶಿಸಲಿದೆ. ಆಗಸ್ಟ್‌ 10ರಂದು ಕೊಡುಗೆ ಅವಧಿ ಮುಕ್ತಾಯವಾಗಲಿದೆ. 

‘₹ 10 ರ ಮುಖಬೆಲೆಯ ಷೇರುಗಳನ್ನು ಬಿಡುಗಡೆ ಮಾಡಲಾಗುವುದು. ಪ್ರತಿ ಷೇರಿನ ನೀಡಿಕೆ ಬೆಲೆ ₹ 418 ರಿಂದ ₹ 422ರವರೆಗೆ ನಿಗದಿ ಮಾಡಲಾಗಿದೆ. ಕನಿಷ್ಠ 35 ಷೇರುಗಳು ಮತ್ತು 35ರ ಗುಣಕದಲ್ಲಿ ಬಿಡ್‌ ಸಲ್ಲಿಸಬಹುದು. ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಯ ಮಧ್ಯಮ ಶ್ರೇಣಿ ಸೂಚ್ಯಂಕದಲ್ಲಿ ವಹಿವಾಟಿಗೆ ಬಿಡುಗಡೆ ಆಗಲಿದೆ’ ಎಂದು ಸಂಸ್ಥೆಯ ಸಿಎಫ್‌ಒ ಬಿ.ಆರ್‌. ದಿವಾಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಐಸಿಐಸಿಐ ಸೆಕ್ಯುರಿಟೀಸ್‌ ಲಿಮಿಟೆಡ್‌, ಕ್ರೆಡಿಟ್‌ ಸೂಯೀಸ್‌ ಸೆಕ್ಯುರಿಟೀಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌, ಐಐಎಫ್‌ಎಲ್‌ ಹೋಲ್ಡಿಂಗ್ಸ್‌ ಮತ್ತು ಕೋಟಕ್‌ ಮಹೀಂದ್ರಾ ಕ್ಯಾಪಿಟಲ್‌ ಕಂಪನಿ ‘ಐಒಪಿ’ ನಿರ್ವಹಣೆ ಮಾಡಲಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !