ಸೂಚ್ಯಂಕದ ಓಟಕ್ಕೆ ತಡೆ

7

ಸೂಚ್ಯಂಕದ ಓಟಕ್ಕೆ ತಡೆ

Published:
Updated:

ಮುಂಬೈ : ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದ  ಹಿಂದಿನ ಎರಡು ವಾರಗಳ ಓಟಕ್ಕೆ ಈ ವಾರ ತಡೆ ಬಿದ್ದಿತು.

ಸೂಚ್ಯಂಕವು ಈ ವಾರ ಅಲ್ಪ ಪ್ರಮಾಣದ (45.26 ಅಂಶ) ಕುಸಿತ ಕಂಡು 36,497 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’, 8.70 ಅಂಶಗಳ ನಷ್ಟಕ್ಕೆ ಗುರಿಯಾದರೂ 11 ಸಾವಿರ ಅಂಶಗಳ ಮಟ್ಟ ಕಾಯ್ದುಕೊಂಡಿದೆ. 11,010 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.

ವಾರದ ಉದ್ದಕ್ಕೂ ವಹಿವಾಟುದಾರರು ಎಚ್ಚರಿಕೆಯಿಂದಲೇ ವಹಿವಾಟು ನಡೆಸಿದರು. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಜೂನ್‌ ತಿಂಗಳ ಹಣದುಬ್ಬರವು ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದರಿಂದ ಆಗಸ್ಟ್‌ ತಿಂಗಳಲ್ಲಿ ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಶೇ 4ರಷ್ಟು ಕಡಿಮೆಯಾಗಿರುವುದು, ಕೆಲ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರವು ಬಂಡವಾಳ ನೆರವು ಘೋಷಿಸಿರುವುದು ಪೇಟೆಯಲ್ಲಿ ಕೆಲ ಮಟ್ಟಿಗೆ ಉತ್ಸಾಹ ಮೂಡಿಸಿತು.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರಿಂದ ಹೂಡಿಕೆದಾರರಲ್ಲಿ ಕೆಲ ಮಟ್ಟಿಗೆ ಆತಂಕ ಮನೆಮಾಡಿತ್ತು. ಆದರೂ, ಶುಕ್ರವಾರದ ವಹಿವಾಟಿನಲ್ಲಿ ಐ.ಟಿ ಮತ್ತು ಔಷಧಿ ವಲಯಗಳ ಷೇರುಗಳಲ್ಲಿನ ಖರೀದಿ ಆಸಕ್ತಿಯಿಂದಾಗಿ ಪೇಟೆಯಲ್ಲಿ ಮತ್ತೆ ಚೇತರಿಕೆ ಕಂಡುಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !