ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರಸದ ಬದುಕಿನ ‘ಹೋಳಿ’ಕಾಮನ ಕಣ್ಣ ಮನಸಿನ ಬಣ್ಣ

Holi- sampath s.
Last Updated 17 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಹೋಳಿ ಬಣ್ಣಗಳ ಹಬ್ಬ. ರತಿ–ಮನ್ಮಥರ ಪ್ರೇಮ ದಿನ. ಜೀವನವನ್ನು ಕಲರ್‌ಫುಲ್‌ ಆಗಿ ನೋಡುವ ಹಬ್ಬ. ಮೋಜಿಗಾಗಿ ಆಡುವ ಬಣ್ಣದೋಕುಳಿ ಇದೀಗ ದೊಡ್ಡ ‘ಫ್ಯಾಷನ್‌’!.

ಮನೆ ಅಥವಾ ರಸ್ತೆಯ ಅಕ್ಕಪಕ್ಕದವರೊಂದಿಗೆ, ಸಂಬಂಧಿಕರು, ಪರಿಚಿತರು, ಗೆಳೆಯರೊಂದಿಗೆ ಕೂಡಿ ಪರಸ್ಪರ ಬಣ್ಣ ಎರಚಿ ಬಣ್ಣದೋಕುಳಿ ಆಡುವ ಹಬ್ಬ. ಸಿಲಿಕಾನ್‌ ಸಿಟಿಯಲ್ಲಿ ಅದೀಗ ವ್ಯಾಪಾರದ ವೇದಿಕೆಯಾಗಿದೆ.

ಬಹತೇಕ ಹಬ್ಬಗಳನ್ನು ಭರ್ಜರಿ ಪಾರ್ಟಿಗಳ ಮೂಲಕ ಆಚರಿಸುವ ಬೆಂಗಳೂರು ಇದೀಗ ಹೋಳಿಯನ್ನೂ ಸೇರಿಸಿಕೊಂಡಿದೆ. ನವರಾತ್ರಿ ಹಬ್ಬವನ್ನು ವಿವಿಧ ಸಮುದಾಯದ ಸಂಘಟನೆಯವರು ಒಂಬತ್ತು ದಿನವೂ ವಿಶೇಷ, ವಿಭಿನ್ನವಾಗಿ ಆಯೋಜಿಸಿದರೆ, ಹೋಳಿ ಹಬ್ಬವನ್ನು ಯುವ ಜನರೇ ಹೆಚ್ಚಾಗಿ ಆಯೋಜಿಸುತ್ತಿದ್ದರು. ಇದೀಗ ವಿಶೇಷವಾಗಿ ನವರಾತ್ರಿ ಮತ್ತು ಹೋಳಿ ಪಾರ್ಟಿಗಳು ಪಂಚತಾರಾ ಹೊಟೇಲ್‌, ಮಾಲ್‌ ಮತ್ತು ರೆಸಾರ್ಟ್‌ಗಳಲ್ಲಿ ಆಯೋಜನೆಗೊಳ್ಳುತ್ತಿವೆ. ಜನ ಕೂಡ ವಿಶೇಷ ಆಸಕ್ತಿ ತೋರುತ್ತಿದ್ದಾರೆ.

ಜಾತಿ, ಧರ್ಮ, ಭಾಷೆ, ಪ್ರಾದೇಶಿಕ ಭಾವನೆಗಳ ಸೋಗಿಲ್ಲದೆ ಯುವ ಸಮುದಾಯ ನಿರ್ದಿಷ್ಟ ಹಣವನ್ನು ಪಾವತಿಸಿ ಓಕುಳಿ ಹಬ್ಬದ ಪಾರ್ಟಿ, ಉತ್ಸವಗಳಲ್ಲಿ ಭಾಗವಹಿಸಿ ವಿವಿಧ ಬಗೆಯ ಬಣ್ಣಗಳಿಂದ ಮೈ, ಮನ ತಣಿಸಿಕೊಂಡು, ರಂಗಿನ ನೀರಿನಲ್ಲಿ ಸ್ನಾನ ಮಾಡಿ ಉಲ್ಲಾಸ, ಉತ್ಸಾಹದಲ್ಲಿ ತೇಲುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಪಾರ್ಟಿಗಳಲ್ಲಿ ಜನ ಸೇರುವುದು ಹೆಚ್ಚಾಗಿರುವುದನ್ನು ಗಮನಿಸಿರುವ ಆಯೋಜಕರು ವಿವಿಧೆಡೆ ಹೆಚ್ಚು ಹೆಚ್ಚು ಪಾರ್ಟಿಗಳನ್ನು ಆಯೋಜಿಸುವುದರಲ್ಲಿ ತೊಡಗಿದ್ದಾರೆ.

ಹೋಳಿ ಹಬ್ಬದ (ಮಾರ್ಚ್‌ 20ರಿಂದ 25ರವರೆಗೆ) ಪಾರ್ಟಿಗಳು ವಿವಿಧ ಹೆಸರಿನಲ್ಲಿ ಈ ವರ್ಷವೂ ಆಯೋಜನೆಗೊಂಡಿವೆ. ಒಬ್ಬರಿಗೆ, ಇಬ್ಬರಿಗೆ ಮತ್ತು ಮೂವರಿಗೆ ಹಾಗೂ ಮಕ್ಕಳಿಗೆ ನಿರ್ದಿಷ್ಟ ಪ್ರವೇಶ ಶುಲ್ಕವನ್ನು ಇಲ್ಲಿ ವಿಧಿಸಲಾಗುತ್ತದೆ. ತಿಂಗಳಿಂದ ವೆಬ್‌ತಾಣಗಳಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿವೆ. ಆಯೋಜಕರು ಆ್ಯಪ್‌ಗಳನ್ನು ಮಾಡಿಕೊಂಡು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ರೈನ್‌ ಡಾನ್ಸ್‌, ವಾಟರ್‌ ಬಲೂನ್‌, ನಾನ್‌ ಸ್ಟಾಪ್‌ ಮ್ಯೂಸಿಕ್‌ ಫನ್‌ಗಳನ್ನು ಏರ್ಪಡಿಸಲಾಗಿದೆ. ಆಹಾರ, ಆಲ್ಕೋಹಾಲ್‌ ಕೌಂಟರ್‌ಗಳು ಅಲ್ಲಿ ತೆರೆದಿರುತ್ತವೆ.

ಕೆಲವೆಡೆ ಹಗಲು ಹೊತ್ತಿನ ಪಾರ್ಟಿಗಳಾದರೆ, ಕೆಲವೆಡೆ ರಾತ್ರಿ ಹೊತ್ತಿನ ಪಾರ್ಟಿಗಳು ಆಯೋಜನೆಗೊಂಡಿವೆ. ಸಾವಯವ ಬಣ್ಣಗಳು, ಪಿಚಕಾರಿಗಳೊಂದಿಗೆ ಪಾರ್ಟಿಯಲ್ಲಿ ಬಣ್ಣದೋಕುಳಿಗೆ ಅವಕಾಶ ಇರುತ್ತದೆ.

ಸದಾಶಿವನಗರ, ಅರಮನೆ ಮೈದಾನ, ಎಂ.ಜಿ. ರಸ್ತೆ, ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ವಿಮಾನ ನಿಲ್ದಾಣ ರಸ್ತೆ, ಯಶವಂತಪುರ, ಪೀಣ್ಯ ಸೇರಿದಂತೆ ನಗರದ ಹಲವೆಡೆ ಇರುವ ಪಂಚತಾರಾ ಹೋಟೆಲ್‌ಗಳು, ರೆಸಾರ್ಟ್‌ಗಳು, ಮಾಲ್‌ಗಳಲ್ಲಿ ಇವು ಆಯೋಜನೆಗೊಂಡಿವೆ.

ಕೆಲವು ಪಾರ್ಟಿ ಸ್ಥಳಗಳು

ಮಂಗಳ ಕಲ್ಯಾಣಮಂಟಪ, ದಕ್ಷಿಣ ಬೆಂಗಳೂರು. ಶುಲ್ಕ: 300 ರೂಪಾಯಿ ಮೇಲ್ಪಟ್ಟು. ಬೆಳಿಗ್ಗೆ 11ರಿಂದ ಸಂಜೆ 6.

ದಿ ಅಡ್ವೆಂಚರ್‌ ಗ್ರೋವ್‌ 76/1, ಜಾಮಿಯಾ ಮಸಜಿದ್‌ ರಸ್ತೆ, ಲಕ್ಷ್ಮಿಪುರ. ವಿದ್ಯಾರಣ್ಯಪುರ. ಶುಲ್ಕ: 999 ರೂಪಾಯಿ ಮೇಲ್ಪಟ್ಟು. ಬೆಳಿಗ್ಗೆ 10ರಿಂದ ಸಂಜೆ 6.

ಕೌಬಾಯ್‌ ರೆಸಾರ್ಟ್‌ 211, ಬಣಂದೂರು ವ್ಹಿಲೇಜ್‌, ಬಿಡದಿ. ಶುಲ್ಕ:999 ರೂಪಾಯಿ ಮೇಲ್ಪಟ್ಟು. ಮಧ್ಯಾಹ್ನ 12ರಿಂದ ರಾತ್ರಿ 11.

ಪೆಬಲ್‌– ದಿ ಜಂಗಲ್‌ ಲೌಂಜ್‌.ಶುಲ್ಕ: 499 ರೂಪಾಯಿ ಮೇಲ್ಪಟ್ಟು. ಬೆಳಿಗ್ಗೆ 10ರಿಂದ ರಾತ್ರಿ 10.

ದಿ ಪಾರ್ಕ್‌, 1ಬಾರ್‌.ಶುಲ್ಕ: 300 ರೂಪಾಯಿ ಮೇಲ್ಪಟ್ಟು. ಬೆಳಿಗ್ಗೆ 10.30ರಿಂದ ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT