ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಸಿದ್ಧತೆ

7

ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಸಿದ್ಧತೆ

Published:
Updated:

ಬೆಂಗಳೂರು: ನೀರಿನ ದರವನ್ನು ಹೆಚ್ಚಳ ಮಾಡಲು ಜಲಮಂಡಳಿಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಮೂಲಗಳು ಹೇಳುವ ಪ್ರಕಾರ ಶೇ 20ಕ್ಕಿಂತ ಹೆಚ್ಚು ದರ ಏರಿಕೆ ಆಗುವ ಸಾಧ್ಯತೆ ಇದೆ.

ಪರಿಷ್ಕೃತ ದರಪಟ್ಟಿಯನ್ನು ತಯಾರಿಸಿ, ರಾಜ್ಯ ಸರ್ಕಾರಕ್ಕೆ ಈ ತಿಂಗಳ ಅಂತ್ಯದೊಳಗೆ ಸಲ್ಲಿಸಲು ಮಂಡಳಿಯ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ನೀರಿನ ಬಿಲ್‌ಗಳೇ ಮಂಡಳಿಗೆ ಪ್ರಮುಖ ಆದಾಯದ ಮೂಲಗಳಾಗಿವೆ. ಕೊಳವೆ ಮತ್ತು ಒಳಚರಂಡಿಗಳ ಜಾಲ ನಿರ್ಮಾಣ, ಕೊಳವೆಬಾವಿಗಳ ನಿರ್ವಹಣೆ, ವಿದ್ಯುತ್‌ ದರ ಸೇರಿದಂತೆ ಮಂಡಳಿಯ ಕಾರ್ಯಾಭಾರದ ಖರ್ಚುಗಳು ಹೆಚ್ಚಿವೆ. ಮಂಡಳಿಗೆ ಸದ್ಯ ತಿಂಗಳಿಗೆ ಸರಾಸರಿ ₹ 90 ಕೋಟಿ ವರಮಾನ ಸಂಗ್ರಹವಾಗುತ್ತಿದೆ. 

‘ವಿವಿಧ ಯೋಜನೆಗಳಿಗೆ ಮಂಡಳಿ ಅಂದಾಜು ₹ 1,600 ಕೋಟಿ ಸಾಲ ಮಾಡಿದೆ. ಅದರ ಅಸಲು ಮತ್ತು ಬಡ್ಡಿ ಪಾವತಿಗೆ ಹಣಕಾಸು ಬೇಕಿದೆ. ನಗರದಲ್ಲಿನ ಸುಮಾರು 7 ಸಾವಿರ ಕೊಳವೆ ಬಾವಿಗಳ ನಿರ್ವಹಣೆಗೂ ಹಣ ಹೊಂದಿಸಬೇಕಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ದರ ಹೆಚ್ಚಳ ಮಾಡಲಾಗುತ್ತಿದೆ’ ಎನ್ನುತ್ತವೆ ಮೂಲಗಳು.

ಮಂಡಳಿಯು ಗೃಹ ಬಳಕೆಗೆ ಸರಬರಾಜು ಮಾಡುತ್ತಿರುವ ನೀರಿಗೆ ₹ 100 (ತಿಂಗಳಿಗೆ 8 ಸಾವಿರ ಲೀ.ವರೆಗೆ–ಕಾವೇರಿ ನೀರು), ₹ 200(8 ಸಾವಿರ ಲೀ.ವರೆಗೆ–ಮಂಡಳಿಯ ಕೊಳವೆ ಬಾವಿ ನೀರು) ನಿಗದಿ ಪಡಿಸಿದೆ. ನೀರಿನ ಪ್ರಮಾಣ ಮತ್ತು ಬಳಕೆಯ ಸ್ವರೂಪ ಆಧರಿಸಿ ದರಗಳಲ್ಲಿ ವ್ಯತ್ಯಾಸವಿದೆ.

2013ರ ಜುಲೈನಲ್ಲಿ ಕೊನೆಯ ಬಾರಿ ದರ ಪರಿಷ್ಕರಣೆಯಾಗಿತ್ತು. ಆಗ ಶೇ 270ರಷ್ಟು ದರವನ್ನು ಏರಿಕೆ ಮಾಡುವ ಮೂಲಕ ಮಂಡಳಿಯು ಬಳಕೆದಾರರಿಗೆ ಆಘಾತ ನೀಡಿತ್ತು. ಆ ದರ ಅಪಾರ್ಟ್‌ಮೆಂಟ್‌ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಸತಿ ಗೃಹಗಳು, ವಿಲ್ಲಾಗಳಿಗೆ ಮಾತ್ರ ಅನ್ವಯವಾಗುವಂತೆ ಪರಿಷ್ಕರಣೆ ಮಾಡಲಾಗಿತ್ತು.

**

ನಿರ್ದಿಷ್ಟ ಪ್ರತಿಶತ ಹೆಚ್ಚಳದ ಹೊಸ ದರಗಳನ್ನು ಸರ್ಕಾರಕ್ಕೆ ಜನವರಿ ಅಂತ್ಯದೊಳಗೆ ಸಲ್ಲಿಸುತ್ತೇವೆ. ಆ ಕುರಿತು ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

–ತುಷಾರ್ ಗಿರಿನಾಥ್, ಅಧ್ಯಕ್ಷ, ಜಲಮಂಡಳಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !