ಶನಿವಾರ, ಆಗಸ್ಟ್ 24, 2019
21 °C

ನೀರಿನ ಸಮಸ್ಯೆ: ಫೋನ್‌ ಇನ್‌ ಕಾರ್ಯಕ್ರಮ ನಾಳೆ

Published:
Updated:

ಬೆಂಗಳೂರು: ಜಲಮಂಡಳಿಯು ಇದೇ 2ರಂದು ಬೆಳಿಗ್ಗೆ 9ರಿಂದ 10.30ರವರೆಗೆ ನೇರ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಿದೆ. ಮಂಡಳಿಯ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ, ಕೊಳವೆ/ಇಳಿ ಗುಂಡಿಯಿಂದ ಕಲುಷಿತ ನೀರು ಹೊರ ಬರುತ್ತಿರುವ ಬಗ್ಗೆ ಅಥವಾ ನೀರಿನ ಬಿಲ್ಲಿನ ಸಮಸ್ಯೆಯ ಕುರಿತು ಸಾರ್ವ ಜನಿಕರು ದೂರು ಹೇಳಿಕೊಳ್ಳಬಹುದು.

ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್. ಸಂಖ್ಯೆ ತಿಳಿಸಿ ದೂರು ನೀಡಬಹುದು ಎಂದು ಜಲಮಂಡಳಿ ಕೋರಿದೆ.

ಗ್ರಾಹಕರು 080–22945119 ಸಂಖ್ಯೆಗೆ ಕರೆ ಮಾಡಿ ಮಾತನಾಡಬಹುದು.

Post Comments (+)