ಸುನೀತಾ ಚವ್ಹಾಣ ಪರ ಮತ ಯಾಚನೆ

ಶುಕ್ರವಾರ, ಏಪ್ರಿಲ್ 19, 2019
30 °C

ಸುನೀತಾ ಚವ್ಹಾಣ ಪರ ಮತ ಯಾಚನೆ

Published:
Updated:
Prajavani

ವಿಜಯಪುರ: ನಗರದ ಹಕೀಂ ಚೌಕ್‌ ವೃತ್ತದಲ್ಲಿ ಬುಧವಾರ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಪರ ಕಾಂಗ್ರೆಸ್‌ ಪದಾಧಿಕಾರಿಗಳು ಮತಯಾಚಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ‘ಈ ಬಾರಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಅವರ ಗೆಲುವು ಖಚಿತವಾಗಿದ್ದು, ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಮನೆ-ಮನೆಗಳಿಗೆ ತೆರಳಿ, ಹಿಂದಿನ ಯುಪಿಎ ಹಾಗೂ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರಗಳು ನೀಡಿದ ಜನಪರ ಯೋಜನೆಗಳು, ಹಲವು ಭಾಗ್ಯಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.

ಅಲ್ಲದೆ ಈ ಬಾರಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಬಡವರಿಗಾಗಿ ಮಾಸಿಕ ₹ 6000 ಜಮಾ ಮಾಡುವುದನ್ನು ಘೋಷಿಸಿದ್ದಾರೆ. ನಮ್ಮ ಪಕ್ಷ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಹೀಗಾಗಿ ಜಿಲ್ಲೆಯ ಜನರು ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಮೂಲಕ ರಾಹುಲ್‌ ಗಾಂಧಿಯವರ ಕೈ ಬಲಪಡಿಸಬೇಕು’ ಎಂದು ಹೇಳಿದರು.

ಶಾಸಕ ದೇವಾನಂದ ಚವ್ಹಾಣ, ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಎಂ.ಎಲ್.ಶಾಂತಗಿರಿ, ಅಜಿತ್‌ಸಿಂಗ್ ಪರದೇಶಿ, ವೈಜನಾಥ ಕರ್ಪೂರಮಠ, ಚಾಂದಸಾಬ್‌ ಗಡಗಲಾವ್‌, ಎಂ.ಎಂ.ಸುತಾರ, ಜಮೀರ್‌ ಅಹ್ಮದ್ ಬಕ್ಷಿ, ಆರತಿ ಶಹಾಪುರ, ಹೈದರ್ ನದಾಫ್‌, ಅಜಾದ್ ಪಟೇಲ್‌, ಗಂಗಾಧರ ಸಂಬಣ್ಣಿ, ಜಮೀರ್‌ ಅಹ್ಮದ್ ಬಾಗಲಕೋಟ, ಮಹಾದೇವಿ ಗೋಕಾಕ, ಅಬ್ದುಲ್‌ಖಾದರ್‌ ಖಾದೀಮ್‌, ಸಾಹೇಬಗೌಡ ಬಿರಾದಾರ, ಇರ್ಫಾನ್‌ ಶೇಖ್‌, ಮಲ್ಲು ತೊರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !