ಆತಂಕ ನೀಗುವುದೇ ಆಹಾರಪದ್ಧತಿ

7

ಆತಂಕ ನೀಗುವುದೇ ಆಹಾರಪದ್ಧತಿ

Published:
Updated:
Deccan Herald

ಈರುಳ್ಳಿ ಸೊಪ್ಪು: ಈರುಳ್ಳಿ ಸೊಪ್ಪು ಬೀಜ ಕಾಮೋತ್ತೇಜಕ ಗುಣವನ್ನು ಹೊಂದಿದ್ದು, ಅಕಾಲಿಕ ಸ್ಖಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಲೈಂಗಿಕಶಕ್ತಿ ವೃದ್ಧಿಸುತ್ತದೆ. ಈ ಮೂಲಕ ದೀರ್ಘಾವಧಿಯ ಲೈಂಗಿಕಕ್ರಿಯೆಗೆ ಪ್ರಚೋದನೆ ನೀಡುವ ಸಾಮರ್ಥ್ಯವನ್ನು ನೀಡುತ್ತದೆ.  ಈರುಳ್ಳಿ ಸೊಪ್ಪಿನ ಬೀಜಗಳನ್ನು ಪುಡಿ ಮಾಡಿ, ನೀರಿನೊಂದಿಗೆ ಬೆರೆಸಬೇಕು. ಊಟಕ್ಕೂ ಮುನ್ನ ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಬೇಕು. ಬಿಳಿ ಈರುಳ್ಳಿ ಕೂಡ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಶುಂಠಿ ಹಾಗೂ ಜೇನು: ಶುಂಠಿಸೇವನೆಯು ದೇಹದಲ್ಲಿ ರಕ್ತಸಂಚಲನವನ್ನು ಚುರುಕುಗೊಳಿಸುತ್ತದೆ. ಪ್ರಮುಖವಾಗಿ ಜನನಾಂಗದ ಸ್ನಾಯುಗಳಿಗೆ ರಕ್ತಸಂಚಲನವನ್ನು ಹೆಚ್ಚಾಗಿಸುತ್ತದೆ. ಇದು ಸ್ಖಲನದ ಮೇಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಅಂಶವಾಗಿದೆ. ಶುಂಠಿಸೇವನೆಯು ದೇಹದಲ್ಲಿ ಉಷ್ಣಾಂಶ ಹೆಚ್ಚಿಸುವುದರಿಂದ ರಕ್ತಸಂಚಲನ ಚುರುಕುಗೊಂಡು ನಿಮಿರುವಿಕೆಗೂ ಸಹಾಯ ಮಾಡುತ್ತದೆ. ಜೇನಿನಲ್ಲೂ ಕಾಮೋದ್ರೇಕಗೊಳಿಸುವ ಗುಣವಿರುವುದರಿಂದ ಇದು ಶುಂಠಿಯ ಮಿಶ್ರಣದೊಂದಿಗೆ ಇನ್ನಷ್ಟು ಸಾಮರ್ಥ್ಯಕ್ಕೆ ಇಂಬು ನೀಡುತ್ತದೆ. ಇದನ್ನು ಸೇವಿಸುವ ಉತ್ತಮ ಮಾರ್ಗವೆಂದರೆ, ಮಲಗುವ ಮುನ್ನ ಜೇನಿನೊಂದಿಗೆ ಅರ್ಧ ಟೀಸ್ಪೂನ್ ಶುಂಠಿ ಬೆರೆಸಿ ಸೇವಿಸುವುದು.

ಬೆಳ್ಳುಳ್ಳಿ: ಬೆಳ್ಳುಳ್ಳಿಯ ಸೇವನೆಯು ಸುದೀರ್ಘ ಲೈಂಗಿಕಕ್ರಿಯೆಗೆ, ಜೊತೆಗೆ ಅಕಾಲಿಕ ಸ್ಖಲನವಾಗದಂತೆ ತಡೆಯುವಲ್ಲಿ ನೆರವಿಗೆ ಬರುತ್ತದೆ. ಉರಿನಿವಾರಕ ಹಾಗೂ ಬ್ಯಾಕ್ಟೀರಿಯಾ ನಿರೋಧಕಗುಣ ಹೊಂದಿರುವ ಬೆಳ್ಳುಳ್ಳಿಯ ಎಸಳುಗಳ ಸೇವನೆಯು ದೇಹದಲ್ಲಿ ರಕ್ತಸಂಚಲನವನ್ನು ವೃದ್ಧಿಸುತ್ತದೆ. ವೀರ್ಯವೃದ್ಧಿಯಲ್ಲೂ ಇದರ ಪಾಲಿದೆ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಹಾಗೆಯೇ ಜಗಿದು ತಿನ್ನಬಹುದು ಇಲ್ಲವೇ ತುಪ್ಪದಲ್ಲಿ ಉರಿದು ಸೇವಿಸಬಹುದು.

ಶತಾವರಿ: ಶತಾವರಿಯ ಬೇರುಗಳು ಅಕಾಲಿಕ ಸ್ಖಲನವನ್ನು ತಡೆಯುವಲ್ಲಿ ಪರಿಣಾಮಕಾರಿ ಮಾರ್ಗ. ಹಾಲಿನಲ್ಲಿ ಇದನ್ನು ಕುದಿಸಿ ಪ್ರತಿದಿನ ಎರಡು ಬಾರಿ ಸೇವಿಸಬೇಕು. ಇದು ಜನನಾಂಗದ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಹಾಗೆಯೇ ಸ್ಖಲನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಸಮತೋಲಿತ ಆಹಾರಕ್ರಮ: ಚಾಕೊಲೇಟ್, ಮೆಣಸಿನಕಾಯಿ ಹಾಗೂ ಕೆಫೆನ್ ಅಂಶಗಳುಳ್ಳ ಪಾನೀಯಗಳನ್ನು ತ್ಯಜಿಸಬೇಕು. ಲೈಂಗಿಕ ಸಮಸ್ಯೆಯ ನಿವಾರಣೆಗೆ ತ್ಯಜಿಸುವಿಕೆ ಅತ್ಯವಶ್ಯಕ ಕೂಡ. ನೀವು ಸೇವಿಸುವ ಆಹಾರ ಜಿಂಕ್, ಸೆಲೆನಿಯಂ, ಕ್ಯಾಲ್ಸಿಯಂ ಹಾಗೂ ಕಬ್ಬಿಣಂಶ ಭರಿತವಾಗಿರುವಂತೆ ನೋಡಿಕೊಳ್ಳಬೇಕು. ಕಾರ್ಬೊಹೈಡ್ರೇಟ್‍ಗಳು ಹೆಚ್ಚಿರುವ ಆಹಾರದ ಸೇವನೆಯು ಸೆರೊಟೊನಿನ್ ಅನ್ನು ಬಿಡುಗಡೆಗೊಳಿಸಿ, ಲೈಂಗಿಕಕ್ರಿಯೆಯಲ್ಲಿನ ಆತಂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.

ಬೆಂಡೆಕಾಯಿ: ಬೆಂಡೆಕಾಯಿ ಕೂಡ ಅಕಾಲಿಕ ಸ್ಖಲನ ತಡೆಯುವಲ್ಲಿ ಅತಿ ಪರಿಣಾಮಕಾರಿ ಮದ್ದು. ಈ ತರಕಾರಿಯನ್ನು ಪ್ರತಿನಿತ್ಯದ ಆಹಾರದೊಂದಿಗೆ ಸೇರಿಸಬಹುದು. ಇಲ್ಲವೇ ಇದನ್ನು ಪುಡಿಯ ರೂಪದಲ್ಲೂ ಸೇವಿಸಬಹುದು.

ಕ್ಯಾರೆಟ್: ಕ್ಯಾರೆಟ್ ರುಚಿಕರ ಮಾತ್ರವಲ್ಲ, ಉಪಯೋಗಕಾರಿ ತರಕಾರಿ ಕೂಡ. ಅತಿ ಶೀಘ್ರವಾಗಿ ಅಕಾಲಿಕ ಸ್ಖಲನವನ್ನು ನಿಯಂತ್ರಣಕ್ಕೆ ತರಬಲ್ಲದು. ಕ್ಯಾರೆಟ್‍ನಲ್ಲಿ ಲಿಬಿಡೊ ಇದ್ದು, ಸ್ಖಲನದ ಮೇಲಿನ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ, ಬೇಯಿಸಿದ ಕ್ಯಾರೆಟ್ ಅನ್ನು ಮೊಟ್ಟೆ ಹಾಗೂ ಜೇನಿನೊಂದಿಗೆ ಬೆರೆಸಿ ನಿರಂತರವಾಗಿ ಸೇವಿಸಿ.

ತಡೆಗಟ್ಟುವಿಕೆ ಹೇಗೆ

ಅಕಾಲಿಕ ಸ್ಖಲನಸಮಸ್ಯೆಯನ್ನು ತಡೆಗಟ್ಟುವ ಸಿದ್ಧ ಮಾರ್ಗಗಳು ಇಲ್ಲ. ಆದರೆ ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಪಾಲಿಸಬಹುದು.

* ಲೈಂಗಿಕ ಜೀವನದೆಡೆ ಆರೋಗ್ಯಕರ ದೃಷ್ಟಿಕೋನವಿರಲಿ. ನಿಮಗೆ ಲೈಂಗಿಕ ಜೀವನದಲ್ಲಿ ಆತಂಕ ಅಥವಾ ಒತ್ತಡದ ಅನುಭವವಾದರೆ ಸೈಕೊಥೆರಪಿ ಅಥವಾ ಲೈಂಗಿಕ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

* ಈ ಸಮಸ್ಯೆಗಳು ಎಷ್ಟೋ ಮಂದಿಗೆ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದೊಂದೇ ಕಾರಣಕ್ಕೆ ಕೀಳರಿಮೆ ಬೆಳೆಸಿಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಹುಡುಕಲು ಮುಂದಾಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !