‘ಕ್ಯಾನ್ಸರ್‌: ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಇಲ್ಲ’

7

‘ಕ್ಯಾನ್ಸರ್‌: ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಇಲ್ಲ’

Published:
Updated:

ಬೆಂಗಳೂರು: ‘ಆಯುರ್ವೇದದಲ್ಲಿ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ಇಲ್ಲ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರಅಭಿಪ್ರಾಯಪಟ್ಟರು. 

ಕಿಮೋ ವೈದ್ಯಕೀಯ ತಜ್ಞರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಲಿಂಫೋಕಾನ್‌–2019’ ವೈದ್ಯಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕ್ಯಾನ್ಸರ್‌ಗೆ ಆಯುರ್ವೇದದಲ್ಲಿ ಚಿಕಿತ್ಸೆ ಇದೆ ಎಂದು ಕೆಲವರು ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಯಾರೋ ಹೇಳುವುದನ್ನು ನಂಬಿ ಜನರು ಆರೋಗ್ಯ ಹಾಳು ಮಾಡಿಕೊಳ್ಳಬಾರದು. ಆಯುರ್ವೇದದಲ್ಲಿ ಈ ರೋಗದ ಬಗ್ಗೆ ಸಂಶೋಧನೆ ನಡೆದಿಲ್ಲ. ಕ್ಯಾನ್ಸರ್‌ ನಿವಾರಣೆಗೆ ಆಯುರ್ವೇದದಲ್ಲಿ ನೀಡಲಾಗುತ್ತಿರುವ ಔಷಧಿಗಳಲ್ಲಿ ಲೋಹದ ಅಂಶ ಪತ್ತೆಯಾಗಿದೆ. ಇದರಿಂದ ಇತರೆ ಅಂಗಗಳಿಗೆ ಹಾನಿಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಆಯುರ್ವೇದ ತಜ್ಞರು ಉತ್ತಮ ಉದ್ದೇಶದಿಂದ ಕೆಲಸ ಮಾಡುತ್ತಿರಬಹುದು. ಆದರೆ, ಅಲೋಪತಿ ಚಿಕಿತ್ಸೆಯಿಂದಾಗಿ ಮಾತ್ರ ಕ್ಯಾನ್ಸರ್‌ನಿಂದ ವ್ಯಕ್ತಿ ಗುಣಮುಖನಾಗುತ್ತಾನೆ’ ಎಂದರು.

‘ಪರಿಸರ ಮಾಲಿನ್ಯ ಮತ್ತು ಬದಲಾದ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಲಿಂಫೋಮೊ ಕ್ಯಾನ್ಸರ್‌ ಹೆಚ್ಚು ಜನರಲ್ಲಿ ಕಂಡುಬರುತ್ತಿದೆ. ಇದು ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಐದುವರ್ಷಗಳಲ್ಲಿ ನಮ್ಮ ಸಂಸ್ಥೆಯಲ್ಲಿ 1,100 ಲಿಂಫೋಮೊ ರೋಗಿಗಳು ಚಿಕಿತ್ಸೆಪಡೆದಿದ್ದಾರೆ’ ಎಂದರು. 

‘ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದರೆ, ಅದರಲ್ಲಿನ ಲೋಹಾಂಶಗಳು ಈ ಕ್ಯಾನ್ಸರ್‌ಗೆ ಕಾರಣವಾಗುತ್ತವೆ’ ಎಂದು ತಿಳಿಸಿದರು. 

ಸಮಾವೇಶದಲ್ಲಿ ವೈದ್ಯಕೀಯ ರಂಗದ ಇತ್ತೀಚಿನ ಬೆಳವಣಿಗೆಗಳ ಕುರಿತು ವಿಚಾರ ಗೋಷ್ಠಿಗಳು ನಡೆದವು. ವಿದೇಶದಿಂದ ಬಂದಿದ್ದ ವೈದ್ಯಕೀಯ ತಜ್ಞರಿಗೆ ಸನ್ಮಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !