ಕ್ಯಾನ್ಸರ್‌ ಚಿಕಿತ್ಸೆ: ಬ್ರಿಟನ್‌–ಭಾರತ ಒಪ್ಪಂದ

ಶುಕ್ರವಾರ, ಜೂನ್ 21, 2019
23 °C

ಕ್ಯಾನ್ಸರ್‌ ಚಿಕಿತ್ಸೆ: ಬ್ರಿಟನ್‌–ಭಾರತ ಒಪ್ಪಂದ

Published:
Updated:

ಲಂಡನ್‌ (ಪಿಟಿಐ):  ಬಾಲ್ಯಾವಸ್ಥೆಯಲ್ಲಿಯೇ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಕಡಿಮೆಗೊಳಿಸುವ ಅಥವಾ ಚಿಕಿತ್ಸೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಬ್ರಿಟನ್‌ನ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. 

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯ ಮತ್ತು ಕೋಲ್ಕತ್ತದ ಟಾಟಾ ವೈದ್ಯಕೀಯ ಕೇಂದ್ರ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಕ್ಯಾನ್ಸರ್‌ ಗುಣಪಡಿಸಬಹುದಾದ ದರವನ್ನು ಶೇ 10ರಿಂದ 15ರಷ್ಟು ವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಿವೆ.

ದೆಹಲಿ, ಮುಂಬೈ, ಚೆನ್ನೈ ಮತ್ತು ಚಂಡಿಗಡದಲ್ಲಿರುವ ಶಿಶು ಕ್ಯಾನ್ಸರ್‌ ಕೇಂದ್ರಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿಯೂ ಈ ಒಪ್ಪಂದ ಸಹಕಾರಿಯಾಗಲಿದೆ. 

‘ಭಾರತದಲ್ಲಿ ಮಕ್ಕಳ ಕ್ಯಾನ್ಸರ್ ಗುಣಪಡಿಸುವ ದರವನ್ನು ಶೇ 10ರಷ್ಟು ವೃದ್ಧಿಗೊಳಿಸಿದರೂ, ಪ್ರತಿ ವರ್ಷ 1,500ಕ್ಕೂ ಹೆಚ್ಚು ಮಕ್ಕಳು ಕ್ಯಾನ್ಸರ್‌ನಿಂದ ಮುಕ್ತರಾಗುತ್ತಾರೆ’ ಎಂದು ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದ ಪ್ರೊ. ವಸ್ಕರ್‌ ಸಹಾ ಅವರು ಹೇಳುತ್ತಾರೆ. 

‘ಕೋಲ್ಕತ್ತದಲ್ಲಿ ಕ್ಯಾನ್ಸರ್‌ನಿಂದ ಬದುಕುಳಿಯುವವರ ಪ್ರಮಾಣ 2014ರಲ್ಲಿ ಶೇ 65ರಷ್ಟಿತ್ತು. 2019ರಲ್ಲಿ ಈ ಪ್ರಮಾಣ ಶೇ 80ರಷ್ಟಾಗಿದೆ’ ಎಂದು ಅವರು ಹೇಳುತ್ತಾರೆ. 

ಭಾರತದಲ್ಲಿ ಪ್ರತಿ 10 ಕ್ಯಾನ್ಸರ್‌ ಪೀಡಿತ ಮಕ್ಕಳ ಪೈಕಿ ನಾಲ್ವರು ಕಳಪೆ ಚಿಕಿತ್ಸೆ ಕಾರಣದಿಂದ ಅಸುನೀಗುತ್ತಿದ್ದಾರೆ. ಚಿಕಿತ್ಸಾ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.

- ಪ್ರೊ. ವಸ್ಕರ್‌ ಸಹಾ, ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದ ವೈದ್ಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !