ಇಂಡೊನೇಷ್ಯಾ ಹಡಗು ದುರಂತದಲ್ಲಿ 31 ಸಾವು

7
ನಾವಿಕನ ಸಮಯಪ್ರಜ್ಞೆಯಿಂದ ನೂರಾರು ಮಂದಿ ಪಾರು

ಇಂಡೊನೇಷ್ಯಾ ಹಡಗು ದುರಂತದಲ್ಲಿ 31 ಸಾವು

Published:
Updated:

ಜಕಾರ್ತ: ಚಂಡಮಾರುತದ ಪರಿಣಾಮ ಇಂಡೊನೇಷ್ಯಾದ ಪ್ರಯಾಣಿಕ ಹಡಗೊಂದು ಸುಲಾವೆಸಿ ದ್ವೀಪ ಪ್ರದೇಶದಲ್ಲಿ ಮುಳುಗಿ 31 ಜನ ಮೃತಪಟ್ಟಿದ್ದಾರೆ.

ಸಮಯಪ್ರಜ್ಞೆ ಮರೆದ ನಾವಿಕ ಮುಳುಗುತ್ತಿರುವ ಹಡಗನ್ನು ದಿಬ್ಬವೊಂದರತ್ತ ಮುನ್ನಡೆಸಿದ್ದು, ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಿದೆ. ಹೀಗಾಗಿ ನೂರಾರು ಪ್ರಯಾಣಿಕರನ್ನು ರಕ್ಷಿಸುವುದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿ ಸಿಬ್ಬಂದಿಯೂ ಸೇರಿ 164 ಜನ ಇದ್ದರು ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಪಡೆ ತಿಳಿಸಿದೆ. ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನದ ನಡುವೆಯೇ ಹಡಗು ಪ್ರಯಾಣ ಆರಂಭಿಸಿತ್ತು. ಅದರಲ್ಲಿ 48 ವಾಹನಗಳೂ ಇದ್ದವು ಎನ್ನಲಾಗಿದೆ.

ಇತ್ತೀಚೆಗೆ ಇಂಡೊನೇಷ್ಯಾದಲ್ಲಿ ಸಂಭವಿಸಿದ ಎರಡನೇ ಹಡಗು ದುರಂತ ಇದಾಗಿದೆ. ಎರಡು ವಾರಗಳ ಹಿಂದೆ ಸುಮಾತ್ರ ಬಳಿ ಸಂಭವಿಸಿದ್ದ ದುರಂತದಲ್ಲಿ 200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !