ಶಾಲಾ ಕಾಂಪೌಂಡಿಗೆ ಗುದ್ದಿದ ಕಾರು, ಇಬ್ಬರ ಸಾವು

7

ಶಾಲಾ ಕಾಂಪೌಂಡಿಗೆ ಗುದ್ದಿದ ಕಾರು, ಇಬ್ಬರ ಸಾವು

Published:
Updated:
Prajavani

ಬೆಂಗಳೂರು: ಕಾರು ಚಾಲಕನ ನಿಯಂತ್ರಣ ತಪ್ಪಿ ಶಾಲೆಯ ಕಾಂಪೌಂಡಿಗೆ ಗುದ್ದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಸರಘಟ್ಟ ಹೋಬಳಿಯ ಹುರುಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರಲ್ಲಿ ವಿನಯ್‌ ಎಂಬಾತ ಮಲ್ಲೇಶ್ವರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಅವರ ಮಗ ಹಾಗೂ ಇನ್ನೊಬ್ಬ ಸುನೀಲ್‌ (ಆತನ ಸ್ನೇಹಿತ) ಎಂದು ಗುರುತಿಸಲಾಗಿದೆ. 

‘ವಿನಯ್, ಗೆಳೆಯ ಸುನೀಲ್‌ನನ್ನು ಕರೆದುಕೊಂಡು ನೆಂಟರ ಮನೆಗೆ ಕಾರಿನಲ್ಲಿ ಹೋಗಿದ್ದರು’ ಎಂದು ಜಾಲಹಳ್ಳಿ ಸಂಚಾರಿ ಪೊಲೀಸರು ಹೇಳಿದ್ದಾರೆ. 

‘ಚಿಕ್ಕನಹಳ್ಳಿ ಗ್ರಾಮದ ಶ್ರೀನಿಧಿ ವಿದ್ಯಾಸಂಸ್ಥೆಯ ಗೋಡೆಗೆ ಕಾರು ಗುದ್ದಿ, ಪಲ್ಟಿ ಹೊಡೆದಿದೆ. ಹಾಗಾಗಿ, ಕಾರಿನ ಅಡಿಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿರಬಹುದು’ ಎಂದು ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 2

    Sad
  • 0

    Frustrated
  • 4

    Angry

Comments:

0 comments

Write the first review for this !