ಕಾಲುವೆಗೆ ಉರುಳಿದ ಕಾರು; ಸಾವು

ಭಾನುವಾರ, ಏಪ್ರಿಲ್ 21, 2019
32 °C

ಕಾಲುವೆಗೆ ಉರುಳಿದ ಕಾರು; ಸಾವು

Published:
Updated:
Prajavani

ಬೆಂಗಳೂರು: ಸರ್ಜಾಪುರ ರಸ್ತೆಯ ಹಾಲನಾಯಕನಹಳ್ಳಿ ತಿರುವಿನಲ್ಲಿ ಕಾರು ಕಾಲುವೆಗೆ ಉರುಳಿ ಬಿ.ಪವನ್ (26) ಎಂಬುವರು ಮೃತಪಟ್ಟು, ಅವರ ಸ್ನೇಹಿತ ಬಾಬುಜಾನ್ ಗಾಯಗೊಂಡಿದ್ದಾರೆ.

ಕಟ್ಟಡ ಸಾಮಗ್ರಿಗಳ ಮಾರಾಟ ಮಳಿಗೆ ನಡೆಸುತ್ತಿದ್ದ ದೊಡ್ಡಕನ್ನಹಳ್ಳಿಯ ಪವನ್, ಎರಡು ವರ್ಷದ ಹಿಂದೆ ಆನೇಕಲ್‌ನ ವರ್ಷಾ ಎಂಬುವರನ್ನು ವಿವಾಹವಾಗಿದ್ದರು. ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ವರ್ಷಾ, ಬಾಣಂತನಕ್ಕೆ ತಾಯಿ ಮನೆಗೆ ಹೋಗಿದ್ದರು.

ಪ್ರತಿದಿನ ಸಂಜೆ ಆನೇಕಲ್‌ಗೆ ಹೋಗಿ ಪತ್ನಿ–ಮಗುವನ್ನು ನೋಡಿಕೊಂಡು ಬರುತ್ತಿದ್ದ ಪವನ್, ಗುರುವಾರ ಸಂಜೆಯೂ ಸ್ನೇಹಿತನೊಟ್ಟಿಗೆ ಕಾರಿನಲ್ಲಿ ತೆರಳಿದ್ದರು. ಅಲ್ಲೇ ಊಟ ಮುಗಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಮನೆಗೆ ಮರಳುವಾಗ, ಹಾಲನಾಯಕನಹಳ್ಳಿ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ.

ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು, ಸಮೀಪದ ಕಾಲುವೆಗೆ ಉರುಳಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಬುಜಾನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಲಾರಿ ಹರಿದು ಸಾವು: ಯಶವಂತಪುರದ ಲಾರಿ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಲಾರಿ ಹರಿದು ರಾಯಚೂರಿನ ಕಾರ್ಮಿಕ ಹನುಮಂತಯ್ಯ ಮೃತಪಟ್ಟಿದ್ದಾರೆ.

ನಿಲ್ದಾಣದಲ್ಲಿ ಶೆಡ್ ಹಾಕಿಕೊಂಡು ನೆಲೆಸಿದ್ದ ಹನುಮಂತಯ್ಯ, ಕೆಲಸ ಕಡಿಮೆ ಇದ್ದುದರಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ಲಾರಿ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ತಿಂಡಿ ತಿಂದು ಬಂದ ಚಾಲಕ, ಹನುಮಂತಯ್ಯ ಅವರನ್ನು ಗಮನಿಸಿದೆ ಲಾರಿ ಚಾಲೂ ಮಾಡಿದರು. ಚಕ್ರಗಳು ಮೈಮೇಲೆ ಹರಿದು ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !