ಚಿಕ್ಕಸಿಂದಗಿ ಬಳಿ ಕಾರು ಪಲ್ಟಿ: ಇಬ್ಬರು ಸಾವು

ಭಾನುವಾರ, ಮೇ 26, 2019
33 °C

ಚಿಕ್ಕಸಿಂದಗಿ ಬಳಿ ಕಾರು ಪಲ್ಟಿ: ಇಬ್ಬರು ಸಾವು

Published:
Updated:
Prajavani

ಸಿಂದಗಿ: ತಾಲ್ಲೂಕಿನ ಚಿಕ್ಕಸಿಂದಗಿ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.

ನಂದಗೇರಿ ಗ್ರಾಮದ ಮಲ್ಲಣ್ಣ ಬಸಲಿಂಗಪ್ಪಗೌಡ ಬಿರಾದಾರ (64) ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಾಳು ಕಲಬುರ್ಗಿ ಜಿಲ್ಲೆಯ ಎಸ್.ಚಿಂಚೋಳಿ ಗ್ರಾಮದ ಚಂದಮ್ಮ ಚಂದ್ರಶ್ಯಾ ಕೋಟನೂರ (60) ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು.

ಅಪಘಾತದಲ್ಲಿ ಕುಮಸಗಿ ಗ್ರಾಮದ ಶಶಿಧರ ಬಿರಾದಾರ, ಜಗದೇವಿ ಬಿರಾದಾರ, ವಿಮಲಾಬಾಯಿ ಬಿರಾದಾರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ 12ರಂದು ಕುಮಸಗಿ ಗ್ರಾಮದ ಶಶಿಧರ ಬಿರಾದಾರ ಮದುವೆ ವಿಜಯಪುರದಲ್ಲಿದ್ದ ಕಾರಣ, ಇವರೆಲ್ಲರೂ ಅಲ್ಲಿಗೆ ಹೊರಟಿದ್ದರು ಎನ್ನಲಾಗಿದೆ.

ನೆರವಾದ ಮಾಜಿ ಶಾಸಕ: ಅಪಘಾತ ಸಂಭವಿಸಿದಾಗ ಅದೇ ರಸ್ತೆಯಲ್ಲಿ ಹೊರಟಿದ್ದ ಮಾಜಿ ಶಾಸಕ ರಮೇಶ ಭೂಸನೂರ ಸರ್ಕಾರಿ ಆಸ್ಪತ್ರೆಯಿಂದ ಅಂಬುಲೆನ್ಸ್ ಕರೆಸಿ, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ನೆರವಾದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !