ಓಲಾ ಚಾಲಕ ಅನುಮಾನಾಸ್ಪದ ಸಾವು

ಸೋಮವಾರ, ಮಾರ್ಚ್ 25, 2019
33 °C

ಓಲಾ ಚಾಲಕ ಅನುಮಾನಾಸ್ಪದ ಸಾವು

Published:
Updated:
Prajavani

ಬೆಂಗಳೂರು: ಕಾಡುಗೋಡಿ ಸಮೀಪ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕ್ಯಾಬ್‌ನಲ್ಲೇ ಚಾಲಕ ಶಿವಪ್ಪ (32) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮಾಲೂರು ತಾಲ್ಲೂಕಿನ ಶಿವಪ್ಪ, ಹಲವು ವರ್ಷಗಳಿಂದ ಓಲಾ ಕಂಪನಿಯಡಿ ಕ್ಯಾಬ್ ಓಡಿಸುತ್ತಿದ್ದರು.

‘ನಿತ್ಯ ಊರಿನಿಂದ ಕೆಲಸಕ್ಕೆ ಬರುತ್ತಿದ್ದ ಶಿವಪ್ಪ, ಕೆಲಸ ಮುಗಿಸಿ ವಾಪಸು ಹೋಗುತ್ತಿದ್ದರು. ವೈಟ್‌ ಫೀಲ್ಡ್‌ಗೆ ಪ್ರಯಾಣಿಕರೊಬ್ಬರನ್ನು ಡ್ರಾಪ್ ಮಾಡಿದ್ದ ಅವರು ಮುಖ್ಯರಸ್ತೆಯಲ್ಲೇ ಸೋಮವಾರ ರಾತ್ರಿ ಕ್ಯಾಬ್‌ ನಿಲ್ಲಿಸಿ ಬಾಗಿಲುಗಳನ್ನು ಲಾಕ್‌ ಮಾಡಿಕೊಂಡು ಮಲಗಿದ್ದರು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬ ಹೇಳಿಕೆ ನೀಡಿದ್ದಾರೆ’ ಎಂದು ಕಾಡುಗೋಡಿ ಪೊಲೀಸರು ಹೇಳಿದರು.

‘ಮಂಗಳವಾರವೂ ಕ್ಯಾಬ್ ರಸ್ತೆಯಲ್ಲೇ ಇತ್ತು. ಸ್ಥಳೀಯರೊಬ್ಬರು ಕಾರಿನೊಳಗೆ ನೋಡಿದಾಗ, ಶಿವಪ್ಪ ಮೃತ ಸ್ಥಿತಿಯಲ್ಲಿ ಮಲಗಿದ್ದು ಕಂಡಿತ್ತು. ನಂತರ, ಸ್ಥಳೀಯರೇ ಠಾಣೆಗೆ ಮಾಹಿತಿ ನೀಡಿದ್ದರು. ಸಂಬಂಧಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಕ್ಯಾಬ್‌ನ ಬಾಗಿಲುಗಳನ್ನು ಒಡೆದು ಶವವನ್ನು ಹೊರಗೆ ತೆಗೆಯಲಾಯಿತು’ ಎಂದು ವಿವರಿಸಿದರು. 

‘ಮದ್ಯವ್ಯಸನಿ ಆಗಿದ್ದ ಶಿವಪ್ಪ, ಸರಿಯಾದ ಸಮಯಕ್ಕೆ ಊಟ ಮಾಡುತ್ತಿರಲಿಲ್ಲ ಎಂಬುದು ಸಂಬಂಧಿಕರಿಂದ ಗೊತ್ತಾಗಿದೆ. ಅದೇ ಕಾರಣಕ್ಕೆ ಅಸ್ವಸ್ಥಗೊಂಡು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಅನುಮಾನವಿದೆ. ಶವದ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !