ಇರಾನ್‌ನಲ್ಲಿ ಸರಕು ಸಾಗಾಣೆ ವಿಮಾನ ಪತನ: 15 ಮಂದಿ ಸಾವು

7

ಇರಾನ್‌ನಲ್ಲಿ ಸರಕು ಸಾಗಾಣೆ ವಿಮಾನ ಪತನ: 15 ಮಂದಿ ಸಾವು

Published:
Updated:
Prajavani

ಟೆಹರಾನ್‌: ದಶಕದಷ್ಟು ಹಳೆಯದಾದ ಇರಾನ್‌ನ ಬೋಯಿಂಗ್‌ 707 ಸೇನಾ ಸರಕು ವಿಮಾನವೊಂದು ಪತನಗೊಂಡು 15 ಮಂದಿ ಸಾವನ್ನಪ್ಪಿದ್ದು, ಒಬ್ಬರು ಬದುಕುಳಿದಿದ್ದಾರೆ.

‘ಕಿರ್ಗಿಸ್ತಾನದಿಂದ ಮಾಂಸವನ್ನು ಹೊತ್ತುತರುತ್ತಿದ್ದ ವಿಮಾನವು, ಇರಾನ್‌ನ ಅರೆಸೇನಾ ಪಡೆಯ ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಪತಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ತುರ್ತು ಭೂಸ್ಪರ್ಶ ಮಾಡಿತು. ಈ ವೇಳೆ ರನ್‌ವೇಯಿಂದ ಜಾರಿ, ಪಕ್ಕದ ತಡೆಗೋಡೆ ಮತ್ತು ವಸತಿಗೃಹಕ್ಕೆ ಡಿಕ್ಕಿ ಹೊಡೆಯಿತು. ಈ ವೇಳೆ ಇಂಧನ ಟ್ಯಾಂಕರ್‌ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಗದಿಯಂತೆ, ಈ ವಿಮಾನವೂ ಟೆಹರಾನ್‌ನಿಂದ 40 ಕಿ.ಮೀ ದೂರದಲ್ಲಿರುವ ಪಯಾಮ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಏಕಾಏಕಿ ವಿಮಾನವನ್ನು ಬೇರೆ ವಿಮಾನ ನಿಲ್ದಾಣದಲ್ಲಿ ಪೈಲಟ್‌ ಯಾವ ಕಾರಣಕ್ಕಾಗಿ ಇಳಿಸಿದ್ದಾನೆ ಎಂಬುದು ಇದುವರೆಗೂ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಾ ವಿಮಾನ ನಿಲ್ದಾಣದ ರನ್‌ವೇ (3,600 ಅಡಿ) ಉದ್ದವಿದ್ದರೆ, ಪಯಾಮ್‌ ವಿಮಾನ ನಿಲ್ದಾಣದ ರನ್‌ವೇ (11,800 ಅಡಿ) ಉದ್ದವಿದೆ. ರನ್‌ವೇ ಚಿಕ್ಕದಿರುವ ಕಾರಣದಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !