ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖೀ ದೇಶ!

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಒಬ್ಬ ಹಿಂದುತ್ವ ನೇತಾರ ತಾನು ಬುಕ್ ಮಾಡಿದ ಓಲಾ ಕ್ಯಾಬ್‌ನ ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಆ ಕ್ಯಾಬ್ ರದ್ದು ಮಾಡಿದ್ದಲ್ಲದೇ ತಾನು ಮಾಡಿದ ಘನ ಕಾರ್ಯದ ಬಗ್ಗೆ ಟ್ವಿಟರ್‌ನಲ್ಲಿ ಕೊಚ್ಚಿಕೊಂಡ ನಂತರ ಆ ಬಗ್ಗೆ ದೇಶದೆಲ್ಲೆಡೆ ಪರ– ವಿರೋಧದ ಚರ್ಚೆಗಳು ನಡೆದವು. ಇಂತಹ ಹಿಂದುತ್ವ ನೇತಾರರ ಸೌಲಭ್ಯಕ್ಕಾಗಿ ನನ್ನದೊಂದು ಪುಟ್ಟ ಸಲಹೆ. ಈ ಕ್ಯಾಬ್ ಬುಕಿಂಗ್‌ ಆ್ಯಪ್‌ನಲ್ಲಿ ಇನ್ನು ಮುಂದೆ ಒಂದು ಹೊಸ ಕಂಡಿಷನ್ ಹಾಕಲು ಪ್ರಯಾಣಿಕರಿಗೆ ಅನುವು ಮಾಡಿಕೊಡಬೇಕು. ಅಂದರೆ ಕ್ಯಾಬ್‌ನ ಡ್ರೈವರ್ ಯಾವ ಜಾತಿ ಮತ್ತು ಯಾವ ಧರ್ಮದವನಾಗಿರಬೇಕು ಎಂಬ ಕಂಡಿಷನ್ ಹಾಕಲು ಪ್ರಯಾಣಿಕರಿಗೆ ಈ ಆ್ಯಪ್‌ನಲ್ಲಿ ಕಾಲಂ ಇಡಬೇಕು (ನಗಬೇಡಿ ಪ್ಲೀಜ್).

ಈ ದೇಶದಲ್ಲಿ ಕುತ್ಸಿತ ರಾಜಕಾರಣಿಗಳು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಇನ್ನು ಮುಂದೆ ವಿಮಾನದ ಪೈಲಟ್ ಯಾವ ಧರ್ಮದವನು, ರೈಲ್ವೆ ಗಾಡಿಯ ಡ್ರೈವರ್ ಯಾವ ಜಾತಿ-ಧರ್ಮದವನು, ಸರ್ಕಾರಿ ಬಸ್ಸಿನ ಡ್ರೈವರ್-ಕಂಡಕ್ಟರ್ ಯಾವ ಜಾತಿ-ಧರ್ಮದವರು ಎಂದು ಮೊದಲೇ ಪ್ರಯಾಣಿಕರಿಗೆ ತಿಳಿಸಿ ಅವರ ಅನುಮತಿ ಪಡೆದೇ ಟಿಕೆಟ್ ಬುಕ್ ಮಾಡಬೇಕು ಎಂಬ ಹೊಸ ನಿಯಮ ಈಗಿನ ಸರ್ಕಾರ ಮಾಡಿದರೆ ಆಶ್ಚರ್ಯವಿಲ್ಲ.

ಇನ್ನು ಮುಂದೆ ಎಲ್ಲಾ  ಹೋಟೆಲಿನಲ್ಲಿಯೂ ಆ ಹೋಟೆಲಿನ ಬಾಣಸಿಗ ಯಾವ ಧರ್ಮದವನು ಎಂಬ ಮಾಹಿತಿಯುಳ್ಳ ಬೋರ್ಡ್ ಹೋಟೆಲಿನ ಮುಂದೆ ತೂಗುಹಾಕುವ ದಿನ ಬರಬಹುದು. ಮೇಲ್ಜಾತಿಯವರು ತಮ್ಮ ಮನೆಯ ಕಕ್ಕಸು, ಡ್ರೈನೇಜ್ ಕ್ಲೀನ್ ಮಾಡಲು ತಮ್ಮದೇ ಧರ್ಮದ ಉಚ್ಚಜಾತಿಯ ಸಫಾಯಿ ಕರ್ಮಚಾರಿ ಬೇಕು ಎಂದು ಕಂಡಿಷನ್ ಹಾಕಿದ ದಿನ ಭಾರತ ಅತ್ಯಂತ ಸುಖೀ ದೇಶವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT