ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಪ್ರಸಾದ್‌ಗೆ ಬೋಧಿವರ್ಧನ ಪ್ರಶಸ್ತಿ

ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಕಾರ್ಯಕ್ರಮ: ಸಾಮಾಜಿಕ ಬದ್ಧತೆಯ ಸೇವೆಗೆ ಮನ್ನಣೆ
Last Updated 20 ಏಪ್ರಿಲ್ 2018, 5:53 IST
ಅಕ್ಷರ ಗಾತ್ರ

ಚಿಂತಾಮಣಿ: ಜನಪದ ಗಾಯಕ, ಗೀತೆ ರಚನೆಕಾರ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ಗೆ ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಶತಮಾನೋತ್ಸವ ಟ್ರಸ್ಟ್‌ 2018 ನೇ ಸಾಲಿನ ‘ಬೋಧಿ ವರ್ಧನ ಪ್ರಶಸ್ತಿ’ ನೀಡಿ ಸನ್ಮಾನಿಸಿದೆ.

ಬೆಂಗಳೂರಿನ ಅಂಜನಾನಗರದ ಸ್ಪೂರ್ತಿಧಾಮದಲ್ಲಿ ಹಮ್ಮಿ ಕೊಂಡಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಮಾತನಾಡಿ, ರಾಜ್ಯದ 5 ಮಂದಿ ಪ್ರಶಸ್ತಿ ಪುರಸ್ಕೃತರಲ್ಲಿ ಗೊಲ್ಲಶಿವಪ್ರಸಾದ್‌ ವಿದ್ಯಾರ್ಥಿ ದೆಸೆಯಿಂದಲೂ ಚಳವಳಿಯ ಒಡನಾಡಿಯಾಗಿದ್ದವರು. ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭ ಒದಗಿ ಬಂದಿರುವುದು ನನಗೆ ಪ್ರಶಸ್ತಿ ಬಂದಷ್ಟು ಸಂತೋಷವನ್ನು ತಂದುಕೊಟ್ಟಿದೆ ಎಂದರು.

ಸಂಸ್ಕೃತಿ, ಸಂಬಂಧಗಳು, ಸಂವಿಧಾನವನ್ನು ಅತಂತ್ರಗೊಳಿಸಲು ಹೊಂಚು ಹಾಕುತ್ತಿರುವ ಷಡ್ಯಂತ್ರಗಾರರ ನಡುವೆ ಜೀವಪರವಾದ ಚಿಂತನೆಗಳನ್ನು ಹೊಂದಿ ಪ್ರಶಸ್ತಿಯನ್ನು ಗಳಿಸಿರುವ ಹಾಸನದ ರೂಪಾ, ಹುಲಿಕಲ್‌ ನಟರಾಜ್‌, ಎಸ್‌. ವರಲಕ್ಷ್ಮೀ, ಶಿವಪ್ರಸಾದ್‌, ಚಂದ್ರಮ್ಮ ಗೋಳ ಅವರ ಸೇವೆ ಅನನ್ಯ. ಅವರಿಗೂ ಇದೇ ಸಂದರ್ಭದಲ್ಲಿ ಪುರಸ್ಕಾರ ನೀಡಲಾಯಿತು ಎಂದು ತಿಳಿಸಿದರು.ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ₹ 20 ಸಾವಿರ ನಗದು ಒಳಗೊಂಡಿದೆ.

ಸಮಾರಂಭದಲ್ಲಿ ಪತ್ರಕರ್ತ ಇಂದೂಧರ ಹೊನ್ನಾಪುರ, ಲೇಖಕಿ ಬಿ.ಟಿ.ಲಲಿತಾ ನಾಯಕ್‌, ಬರಹಗಾರ ರಹಮತ್‌ ತರಿಕೆರೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT