ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಇ ಲಾಭ ಹೆಚ್ಚಳ

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ : ಮುಂಬೈ ಷೇರು ವಿನಿಮಯ ಕೇಂದ್ರವು (ಬಿಎಸ್‌ಇ) ಮೂರನೇ ತ್ರೈಮಾಸಿಕದಲ್ಲಿ ₹ 58.67 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 52.77 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭ ಪ್ರಮಾಣ ಶೇ 11 ರಷ್ಟು ಏರಿಕೆ ಕಂಡಿದೆ.

ಕಾರ್ಯಾಚರಣೆ ವರಮಾನ ₹ 86.40 ಕೋಟಿಗಳಿಂದ ₹ 125.70 ಕೋಟಿಗಳಿಗೆ ಏರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಷೇರು ನಗದು ವಿಭಾಗದ ವಹಿವಾಟು ಶೇ 57 ರಷ್ಟು ಹೆಚ್ಚಾಗಿದ್ದು, ₹4,781 ಕೋಟಿಗಳಿಗೆ ಏರಿಕೆ ಕಂಡಿದೆ.

‘9 ತಿಂಗಳ ಅವಧಿಯಲ್ಲಿ ನಿವ್ವಳ ಲಾಭ ₹ 160 ಕೋಟಿಯಿಂದ ₹ 649 ಕೋಟಿಗಳಿಗೆ ಶೇ 305 ರಷ್ಟು ಭಾರಿ ಏರಿಕೆ ದಾಖಲಿಸಿದೆ’ ಎಂದು ಬಿಎಸ್‌ಇ ಸಿಇಒ ಆಶಿಶ್‌ ಕುಮಾರ್‌ ಚೌಹಾಣ್‌ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT