ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನನ್ನ ಬದುಕಿನ ಕೊನೆಯುಸಿರು ಇರುವವರೆಗೂ ನಾಡಿನ ರೈತರ ಸೇವೆಗಾಗಿ ಮುಡಿಪಾಗಿಡುತ್ತೇನೆ'

Last Updated 19 ಮೇ 2018, 14:12 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಭಾಷಣ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿ ಮಾತು ಆರಂಭಿಸಿದ್ದರು. 

[related]

ಭಾಷಣದ ಮುಖ್ಯಾಂಶಗಳು
* ಹಿಂದಿನ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ನಮಗೆ 104 ವಿಧಾನಸಭಾ ಕ್ಷೇತ್ರದಲ್ಲಿ ಜನರು ಆಶೀರ್ವಾದ ಮಾಡಿದರು. ನನ್ನ ಹಿಂದಿನ ಆಡಳಿತ ಮತ್ತು ಮೋದಿ ಅವರ ಮೇಲೆ ಜನರಿಗೆ ವಿಶ್ವಾಸ ಇತ್ತು.

* ಚುನಾವಣೆಯಲ್ಲಿ ಸೋತ ನಂತರ ಎರಡೂ ಪಕ್ಷಗಳೂ ಅವಕಾಶವಾದಿ ಹೊಂದಾಣಿಕೆ ರಾಜಕಾರಣ ಮಾಡಿದರು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿತ್ತು. ದೊಡ್ಡ ಪಕ್ಷ ಎಂಬ ವಿಚಾರ ಪರಿಗಣಿಸಿ ರಾಜ್ಯಪಾಲರು ನಮಗೆ ಆಮಂತ್ರಣ ಕೊಟ್ಟರು.

* ಜನರಿಗೆ ಹಿಂದಿನ ಸರ್ಕಾರದ ಬಗ್ಗೆ ಆಕ್ರೋಶವಿತ್ತು. ಕಳೆದ ಐದು ವರ್ಷಗಳಿಂದ ಅನೇಕ ಏಳುಬೀಳು ಕಂಡಿದ್ದೇವೆ. ಅರಣ್ಯ ಭೂಮಿ ಒಕ್ಕಲು ಮಾಡಿದವರನ್ನು ಉಳಿಸಲು ನಾನು ಶ್ರಮಿಸಿದೆ, ಹೋರಾಡಿದೆ

* ಇಲ್ಲಿ ನಮಗೆ ಏನೂ ಕೊರತೆಯಿಲ್ಲ. ಸಾಕಷ್ಟು ನೈಸರ್ಗಿಕ ಸಂಪನ್ಮೂಲವಿದೆ. ಆದರೆ ಪ್ರಾಮಾಣಿಕತೆಯ ಕೊರತೆ ಕಾಣಿಸಿಕೊಂಡಿದೆ. ಅಂಥದ್ದೇ ಸಂದರ್ಭದಲ್ಲಿ ಚುನಾವಣೆ ನಡೆಯಿತು.

* ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮಗೆ ನೀರಾವರಿ ಯೋಜನೆ ಪೂರ್ಣ ಮಾಡಲು ಆಗಲಿಲ್ಲ. ಕುಡಿಯುವ ನೀರು ಕೊಡಲು ಆಗಲಿಲ್ಲ. ಸಂಕಷ್ಟ ಪರಿಸ್ಥಿತಿ ನಾಡಿನ ಉದ್ದಗಲಕ್ಕೆ ಇದೆ.

* ನಿರಂತರ ಹೋರಾಟ, ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಸೇವೆ ಮಾಡಬೇಕು ಎನ್ನುವ ಹಂಬಲ ನನ್ನಲ್ಲಿದೆ. ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೆ ನಾಡಿನ ರೈತರ ಸೇವೆಗೆ ಮುಡಿಪಾಗಿಡ್ತೀನಿ

* ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ₹1ಲಕ್ಷದವರೆಗಿನ ರೈತರ ಸಾಲ, ನೇಕಾರರ ಸಮುದಾಯದ ಸಾಲ ಮನ್ನಾ ಮಾಡಬೇಕು ಅಂತ ಅಂದುಕೊಂಡಿದ್ದೆ
* ನೀರಾವರಿಗೆ ಆದ್ಯತೆ ನೀಡಬೇಕು. ಆವರ್ತ ನಿಧಿಯ ಮೂಲಕ ಬೆಳೆಗಳಿಗೆ ಬೆಂಬಲ ಬೆಲೆ ಕೊಡಬೇಕು ಅಂತ ಆಲೋಚಿಸಿದ್ದೆ
* ಈ ನಾಡಿನ ಪರಿಶಿಷ್ಟ ಜಾತಿ/ಪಂಗಡದವರ ಸಂಕಷ್ಟ ತಿಳಿದುಕೊಳ್ಳಲು ಅವರ ಮನೆಗಳಿಗೆ ಹೋಗಿ ತಿಂಡಿ ತಿಂದೆ. ಅವರ ಕಷ್ಟ ಅರಿತೆ.

*ಐದು ವರ್ಷದ ಹಿಂದೆ ಆಲಮಟ್ಟಿ ಅಣೆಕಟ್ಟು 524 ಮೀಟರ್ ಏರಿಸಲು ನಿಮ್ಮ ಸರ್ಕಾರ ಏನು ಮಾಡಲಿಲ್ಲ. ನಾನು ತಕ್ಷಣ ಈ ಕೆಲಸ ಮಾಡಲು ನಿರ್ಧರಿಸಿದ್ದೆ.
ಇಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕೇಂದ್ರ ಅಗತ್ಯ ಹಣಕಾಸು ನೆರವು ಕೊಟ್ಟಿದೆ. ರೈಲು, ಮೆಟ್ರೊ ಯೋಜನೆಗಳಿಗೆ ಹಣ ಕೊಟ್ಟಿದೆ.

*ಮೋದಿ ಅವರು ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಲಿಲ್ಲ. ಅಲ್ಲಿ ಪ್ರಧಾನಿ ಸರ್ಕಾರ, ಇಲ್ಲಿ ನನ್ನ ಸರ್ಕಾರ ಕೇಂದ್ರದಿಂದ ಹೆಚ್ಚುವರಿ ಹಣ ತಂದು ಕರ್ನಾಟಕವನ್ನು ಮಾದರಿ ರಾಜ್ಯ ಮಾಡಬೇಕು ಅಂದುಕೊಂಡಿದ್ದೆ

* ರಾಜ್ಯದ ಜನ 113 ಸ್ಥಾನ ನೀಡಿದ್ದರೆ ರಾಜ್ಯದ ಚಿತ್ರಣವೇ ಬೇರೆ ಇರುತ್ತಿತ್ತು

* ಇದು ಮೊದಲಲ್ಲ. ನನ್ನ ಜೀವನದ ಉದ್ದಗಲಕ್ಕೂ ಅಗ್ನಿಪರೀಕ್ಷೆ ಎದುರಿಸಿದ್ದೇನೆ.

* ಜೀವನದ ಕೊನೆಯ ಉಸಿರಿನವರೆಗೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನೂ ಗೆಲ್ಲಿಸಿಕೊಡಲಿದ್ದೇನೆ.

* ಆಶೀರ್ವಾದ ಮಾಡಿದ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ

* ಅಧಿಕಾರ ಸಿಗಲಿ ಬಿಡಲಿ, ಜನರಿಗಾಗಿ ಜೀವ ಸವೆಸಲಿದ್ದೇನೆ

* ಕಾಂಗ್ರೆಸ್ ನಾಯಕರ ಕುತಂತ್ರದಿಂದ ಜನಾದೇಶಕ್ಕೆ ಹಿನ್ನಡೆ

*ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೀನಿ ಅಂತ ಕೆಲವರು ಹೇಳಿದ್ದರು. ನಾನು ಹಾಗಲ್ಲ. ಜನರಿಗಾಗಿ ಪ್ರಾಣ ಕೊಡ್ತೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT