ವಿಚಾರಣೆಗೆ ಹೈಕೋರ್ಟ್ ತಡೆ

7
ರೋಷನ್‌ ಬೇಗ್‌, ಕುಟುಂಬದ ವಿರುದ್ಧದ ಪ್ರಕರಣ

ವಿಚಾರಣೆಗೆ ಹೈಕೋರ್ಟ್ ತಡೆ

Published:
Updated:

ಬೆಂಗಳೂರು: ‘ಆದಾಯ ಮೀರಿ ₹ 36 ಲಕ್ಷ ಮೌಲ್ಯದ ಆಸ್ತಿ ಗಳಿಕೆ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್ ಬೇಗ್ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಹೈಕೋರ್ಟ್‌ಗೆ ತಡೆ ನೀಡಿದೆ.

ಈ ಕುರಿತಂತೆ ಶಾಸಕ ರೆಹಮಾನ್‌ ರೋಷನ್ ಬೇಗ್, ಪತ್ನಿ ಸಬಿನಾ ರೋಷನ್ ಅಲಿಯಾಸ್ ಸಬೀನಾ ಫಾತಿಮಾ ಮತ್ತು ಪುತ್ರ ರುಮಾನ್ ಬೇಗ್ ರೆಹಮಾನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.

ಪ್ರತಿವಾದಿಗಳಾದ ಲೋಕಾಯುಕ್ತ ಪೊಲೀಸರು ಮತ್ತು ಬೇಗ್‌ ಕುಟುಂಬದ ಸದಸ್ಯರ ವಿರುದ್ಧ ಖಾಸಗಿ ದೂರು ಸಲ್ಲಿಸಿರುವ ಅಬ್ದುಲ್ ಹಕ್ ಸುರತಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ಏನಿದು ಪ್ರಕರಣ : ‘ರೋಷನ್ ಬೇಗ್ ತಮ್ಮ ಅಧಿಕಾರ ಹಾಗೂ ಸ್ಥಾನ ದುರ್ಬಳಕೆ ಮಾಡಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಗಳಿಸಿದ್ದಾರೆ’ ಎಂದು ಆರೋಪಿಸಿ ಶಿವಾಜಿನಗರದ ನಿವಾಸಿ ಅಬ್ದುಲ್ ಹಕ್ ಸುರತಿ, 2012ರ ಜೂನ್ 14ರಂದು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಇದರನ್ವಯ ಲೋಕಾಯುಕ್ತ ಪೊಲೀಸರು 2012 ಜುಲೈ 12ರಂದು ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು 2014ರ ಏಪ್ರಿಲ್‌ 22ರಂದು ಕೋರ್ಟ್‌ಗೆ ‘ಬಿ’ ರಿಪೋರ್ಟ್ ಸಲ್ಲಿಸಿ, ರೋಷನ್ ಬೇಗ್, ಅವರ ಪತ್ನಿ ಹಾಗೂ ಪುತ್ರನ ವಿರುದ್ಧದ ಆರೋಪಗಳನ್ನು ಕೈ ಬಿಟ್ಟಿದ್ದರು.

ಈ ‘ಬಿ’ ರಿಪೋರ್ಟ್ ಅನ್ನು ಆಕ್ಷೇಪಿಸಿದ್ದ ಸುರತಿ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಸಿದ ನಾಲ್ಕು ವರ್ಷಗಳ ಬಳಿಕ 2018ರ ಮೇ 5ರಂದು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ ಕೋರ್ಟ್, ಬೇಗ್ ಮತ್ತವರ ಕುಟುಂಬದ ಸದಸ್ಯರಿಗೆ ಸಮನ್ಸ್ ಜಾರಿ ಮಾಡಿದೆ.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !