ವಿರಾಜಪೇಟೆ ಪಟ್ಟಣ: ಏಕಮುಖ ಸಂಚಾರ ಮಾರ್ಗ

7

ವಿರಾಜಪೇಟೆ ಪಟ್ಟಣ: ಏಕಮುಖ ಸಂಚಾರ ಮಾರ್ಗ

Published:
Updated:

ಮಡಿಕೇರಿ: ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಇವರ ಸಲಹೆಯಂತೆ ವಿರಾಜಪೇಟೆ ಪಟ್ಟಣದಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ, ನಿಲುಗಡೆಗೆ ವ್ಯವಸ್ಥೆ ಹಾಗೂ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.ಏಕಮುಖ ಸಂಚಾರ ಮಾರ್ಗ ಇಂತಿದೆ: ಗೋಣಿಕೊಪ್ಪದಿಂದ ಮಡಿಕೇರಿಗೆ ಹೋಗುವ ವಾಹನಗಳು ಮಟನ್ ಮಾರ್ಕೆಟ್ ಜಂಕ್ಷನ್‌ನಿಂದ ಸುಣ್ಣದ ಬೀದಿಯ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣದವರೆಗೆ ಸಂಚರಿಸುವುದನ್ನು ನಿಷೇಧಿಸಿದೆ. ಖಾಸಗಿ ಬಸ್ ನಿಲ್ದಾಣದಿಂದ ಸುಣ್ಣದ ಬೀದಿಯ ಮಾರ್ಗವಾಗಿ ಮಟನ್ ಮಾರ್ಕೆಟ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದೆ.

 

ಈಗ ಏಕಮುಖ ಸಂಚಾರಕ್ಕೆ ಆದೇಶಿಸಿದ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳು ಕೆ.ಎಸ್.ಆರ್.ಟಿ.ಸಿ. ಮುಂಭಾಗದಿಂದ ದೊಡ್ಡಟ್ಟಿ ಚೌಕಿ ಮೂರ್ನಾಡು ರಸ್ತೆ ಚಿಕ್ಕಪೇಟೆ ಕಡೆಗೆ ಸಂಚರಿಸುವುದು.ಮಡಿಕೇರಿಯಿಂದ ಗೋಣಿಕೊಪ್ಪ ಕಡೆಗೆ ಹೋಗುವ ರಸ್ತೆಯಲ್ಲಿ ಮೂರ್ನಾಡು ಜಂಕ್ಷನ್‌ನಿಂದ ದೊಡ್ಡಟ್ಟಿ ವೃತ್ತದವರೆಗಿನ ರಸ್ತೆಯು ಕಿರಿದಾಗಿರುವು ದರಿಂದ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಅಧಿಕ ಚಕ್ರದ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

 

ಬದಲಾಗಿ ಮೂರ್ನಾಡು ಜಂಕ್ಷನ್, ಗಡಿಯಾರ ಕಂಬ, ಮಟನ್ ಮಾರ್ಕೆಟ್ ಜಂಕ್ಷನ್ ಮೂಲಕ ಗೋಣಿಕೊಪ್ಪಕ್ಕೆ ಮಾರ್ಗದಲ್ಲಿ ಚಲಿಸು ವಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡುವುದು.ವಿರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿ ರುವ ಬದ್ರಿಯಾ ಜಂಕ್ಷನ್‌ನಿಂದ ಗಡಿಯಾರ ಕಂಬದ ವರೆಗೆ ಮತ್ತು ಮೂರ್ನಾಡು ರಸ್ತೆ ಜಂಕ್ಷನ್‌ನಿಂದ ದೊಡ್ಡಟ್ಟಿ ಚೌಕಿವರೆಗೆ ಸಂಚರಿಸುವ ಲಘು ಮತ್ತು ಭಾರಿ ವಾಹನಗಳಿಗೆ ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡುವುದು.ಮಲಬಾರ್ ರಸ್ತೆಯ ಬದ್ರಿಯಾ ಹೋಟೆಲ್‌ನಿಂದ ಸ್ಟಾರ್ ಜಂಕ್ಷನ್‌ನ ಅಮ್ಮಾ ಹೋಟೆಲ್‌ವರೆಗೆ 100್ಡ5 ಅಡಿ ಉದ್ದಗಲದಲ್ಲಿ ಖಾಯಂ ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡುವುದು.ಗಾಂಧಿನಗರ ರಸ್ತೆ ಜಂಕ್ಷನ್ ಹಾರ್ಡ್‌ವೇರ್ ಶಾಪ್‌ನಿಂದ ಬದ್ರಿಯಾ ಜಂಕ್ಷನಿನ ಮನ್ನಾ ಕ್ಲಾಪ್ ಶಾಪ್‌ವರೆಗೆ ಲಭ್ಯವಿರುವ 200X6 ಅಡಿ ಉದ್ದ ಗಲಗಳಲ್ಲಿ ನಾಲ್ಕು ಚಕ್ರದ ವಾಹನಗಳು ಪ್ರತಿ ತಿಂಗಳ ದಿನಾಂಕ ಒಂದರಿಂದ ಹದಿನೈದರವರೆಗೆ ಹಾಗೂ ದಿನಾಂಕ ಹದಿನಾರರಿಂದ ಮೂವತ್ತರವರೆಗೆ ಫೆಡರೇಷನ್ ಬ್ರಾಂಡಿ ಶಾಪ್‌ನಿಂದ ಬದ್ರಿಯಾ ಜಂಕ್ಷನ್ ಫೆಡರೇಷನ್ ಬ್ಯಾಂಕ್‌ವರೆಗೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಡುವುದು.ಗಡಿಯಾರ ಕಂಬದ ಬಳಿ ಡ್ರೀಮ್ ಆಡಿಯೋ ಶಾಪ್‌ನಿಂದ ಸನಾ ಪ್ಯಾಲೇಸ್ ಅಂಗಡಿವರೆಗಿನ 15X5 ಅಡಿ ಉದ್ದಗಲದಲ್ಲಿ  ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವುದು.ಮೂರ್ನಾಡು ಜಂಕ್ಷನ್ ಬಳಿ ಇರುವ ಶ್ರೀನಿವಾಸ ಜುವೆಲ್ಲರಿ ಅಂಗಡಿಯಿಂದ ಬೋರೇಗೌಡ ಕಾಂಪ್ಲೆಕ್ಸ್ ವರೆಗೆ ಲಭ್ಯವಿರುವ 200X6 ಅಡಿ ಉದ್ದಗಲದಲ್ಲಿ ಪ್ರತಿ ತಿಂಗಳ ದಿನಾಂಕ ಒಂದರಿಂದ ಹದಿನೈದರವರೆಗೆ ಹಾಗೂ ಮೂರ್ನಾಡು ಜಂಕ್ಷನ್ ಬಳಿ ಇರುವ ಮಹಾಲಕ್ಷ್ಮಿ ಜುವೆಲ್ಲರಿ ಶಾಪ್‌ನಿಂದ ಬರ್ನಾಡ್ ಬ್ರಾಂಡಿ ಶಾಪ್‌ವರೆಗೆ  250X6 ಅಡಿ ಉದ್ದಗಲದಲ್ಲಿ ದಿನಾಂಕ ಹದಿನಾರರಿಂದ ಮೂವತ್ತೊಂದರವರೆಗೆ ಖಾಯಂ ಆಗಿ ಲಘುವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡುವುದು.ಗಾಯತ್ರಿ ಭವನ ಹೋಟೆಲ್‌ನಿಂದ ಬೋರೇಗೌಡ ಕಾಂಪ್ಲೆಕ್ಸ್ ತೈಕೀನ್ ಹೋಟೆಲಿಗೆ ಹೋಗುವ ರಸ್ತೆ ಯವರೆಗೆ ಖಾಯಂ ಆಗಿ 15X5 ಅಡಿ ಉದ್ದಗಲ ದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡುವುದು.ಮಹಾವೀರ ಮೆಡಿಕಲ್ ಶಾಪ್‌ನಿಂದ ಶಿಫಾ ಮೆಡಿಕಲ್ ಶಾಪ್‌ನವರೆಗೆ ಶಬರಿಗಿರಿ ಬೇಕರಿಯ ಮುಂಭಾಗದಲ್ಲಿ ಖಾಯಂ ಆಗಿ 10X5 ಅಡಿ ಉದ್ದ ಗಲದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.ಎಸ್.ಎಸ್.ರಾಮಮೂರ್ತಿ ರಸ್ತೆಯ ಮಟನ್ ಮಾರ್ಕೆಟ್ ಜಂಕ್ಷನ್‌ನಿಂದ ಕೆ.ಎಸ್. ಸೌಂಡ್ಸ್ ಶಾಮಿಯಾನ ಶಾಪ್‌ನವರೆಗೆ  ಹಾಗೂ ಸಾಗರ್ ಫರ್ನೀಚರ್ಸ್‌ ಅಂಗಡಿಯಿಂದ ಅತ್ರೆಯ ಆಸ್ಪತ್ರೆ ಯವರೆಗೆ ಕ್ರಮವಾಗಿ ತಿಂಗಳ ಒಂದನೇ ತಾರೀಕಿನಿಂದ ಹದಿನೈದರವರೆಗೆ ಮತ್ತು ಹದಿನಾರರಿಂದ ಮೂವತ್ತೊಂದರವರೆಗೆ 200X5 ಅಡಿ ಉದ್ದಗಲದ ಜಾಗದಲ್ಲಿ ಲಘುವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.ದೊಡ್ಡಟ್ಟಿ ಚೌಕಿಯ ಸೀತಾಲಕ್ಷ್ಮಿ ಲಾಡ್ಜ್‌ನಿಂದ ಬೀನಾ ಬೇಕರಿಯವರ ಮನೆ ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡುವುದು ಮತ್ತು ಡಾ. ನರಸಿಂಹ ಮನೆ ಜಂಕ್ಷನ್‌ನಿಂದ ರಾಷ್ಟ್ರ ಬಂಧು ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದು ಮಡಿಕೇರಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರು ಈ ಅಧಿಸೂಚನೆ ಹೊರಡಿಸಿದ್ದಾರೆ.ವಿರಾಜಪೇಟೆ ಪಟ್ಟಣದಲ್ಲಿ ವಾಹನ ಸಂಚಾರದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲು ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಸ್ತಾವನೆಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರ ಅಭಿಪ್ರಾಯದಂತೆ ಏಕಮುಖ ಸಂಚಾರಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry