7

ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು

Published:
Updated:

ಬೆಂಗಳೂರು:  `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಬೇಕು. ಇಲ್ಲವಾದರೆ ರಾಜ್ಯದ ಜನತೆಯ ಭಾವನೆಗಳನ್ನು ಅಗೌರವಿಸಿದಂತಾಗುತ್ತದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಧನಾತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಆಶಯ ವ್ಯಕ್ತಪಡಿಸಿದರು.ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿಯು ಪುರಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು         ಮಾತನಾಡಿದರು. 

`ಬೆಂಗಳೂರು ನಗರವನ್ನು ಕಟ್ಟಿ ಬೆಳಸುವಲ್ಲಿ ಶ್ರಮ ವಹಿಸಿದ ಕೆಂಪೇಗೌಡರು ಒಕ್ಕಲಿಗ ಸಮುದಾಯದ ಹೆಮ್ಮೆ. ಅವರ ಸಾಧನೆಗಳು ನಮ್ಮೆಲ್ಲರಿಗೂ ಆದರ್ಶ   ನೀಯ~ ಎಂದು ಹೇಳಿದರು.ಸಾಹಿತಿ ಡಾ.ದೇ.ಜವರೇಗೌಡ ಅವರು ಮಾತನಾಡಿ, `ಕೆಂಪೇಗೌಡರು ರೈತರಿಗೆ ನೀರಿನ ಪೂರೈಕೆ ಮಾಡುವ ದೃಷ್ಟಿಯಿಂದ ನಗರದ ವಿವಿಧೆಡೆ ಕೆರೆಗಳನ್ನು ನಿರ್ಮಿಸಿದರು. ಆದರೆ, ಧನದಾಹಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಕೆರೆಗಳು ಒತ್ತುವರಿಗೊಂಡು ನಾಶವಾಗುತ್ತಿವೆ~ ಎಂದು ದೂರಿದರು. 

`ಒಕ್ಕಲಿಗ ಸಮುದಾಯದ ಕವಿ ಕುವೆಂಪು ಅವರ ಕೃತಿಗಳಲ್ಲಿ ರೈತನ ಕುರಿತು ಅಪಾರ ಪ್ರೀತಿ ಮತ್ತು ಸಹಾನುಭೂತಿ ಇದೆ. ಅಂತಹ ಮತ್ತೊಬ್ಬ ಕವಿ ಈ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ~ ಎಂದು ಅಭಿಪ್ರಾಯಪಟ್ಟರು.ಮಾಜಿ ಸಂಸದೆ ತೇಜಸ್ವಿನಿಗೌಡ ಅವರು ಮಾತನಾಡಿ, `ಈ ನಾಡು ಮತ್ತು ಸಂಸ್ಕೃತಿಗೆ ಕೆಂಪೇಗೌಡರ ಕೊಡುಗೆ ಆಪಾರ. ರಾಜ್ಯ ಸರ್ಕಾರವು ನಗರದ ಕೇಂದ್ರ ಭಾಗದಲ್ಲಿರುವ ರೇಸ್‌ಕೋರ್ಸ್ ಜಾಗದಲ್ಲಿ ದ್ವಿಗೋಪುರಗಳನ್ನು ನಿರ್ಮಿಸಿ ಅದಕ್ಕೆ ಕೆಂಪೇಗೌಡರ ಹೆಸರಿಡಬೇಕು~ ಎಂದು ಒತ್ತಾಯಿಸಿದರು.`ಹಂಪಿ ನಗರದ ಮಾದರಿಯನ್ನು ಅನುಕರಿಸಿ ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿದರು. ಇಂದು ಹಂಪಿ ಅವಸಾನ ಸ್ಥಿತಿಯನ್ನು ತಲುಪಿದೆ. ಆದರೆ, ನಗರವು ಜಾಗತಿಕವಾಗಿ ಬೆಳೆಯುತ್ತಿದೆ. ಒಕ್ಕಲಿಗ ಸಮುದಾಯವು ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟು ಮತ್ತು ಹೋರಾಟ ಪ್ರದರ್ಶಿಸಬೇಕಿದೆ~ ಎಂದು ಹೇಳಿದರು.ಬಿ.ಟಿ.ಎಲ್. ವಿದ್ಯಾಸಂಸ್ಥೆಯ ಬಿ.ಟಿ.ಲಕ್ಷ್ಮಣ್, ಚಲನಚಿತ್ರ ನಿರ್ದೇಶಕ ಜೆ.ಬಲರಾಮ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry