7

ಎಡಿಇ ತಂಡಕ್ಕೆ ಗೆಲುವು

Published:
Updated:
ಎಡಿಇ ತಂಡಕ್ಕೆ ಗೆಲುವು

ಬೆಂಗಳೂರು: ಎಡಿಇ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಎ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಡಿಇ 2-0 ಗೋಲುಗಳಿಂದ ಎಜಿಒಆರ್‌ಸಿ ತಂಡವನ್ನು ಮಣಿಸಿತು. ಸಂತೋಷ್ (12ನೇ ನಿಮಿಷ) ಮತ್ತು ಮುರುಗನ್ (19) ಅವರು ಗೋಲು ಗಳಿಸಿ ಎಡಿಇ ಗೆಲುವಿಗೆ ಕಾರಣರಾದರು.ಎಜಿಒಆರ್‌ಸಿ ತಂಡದ ಆಟಗಾರರು ಗೋಲು ಗಳಿಸಲು ನಡೆಸಿದ ಎಲ್ಲ ಪ್ರಯತ್ನಗಳನ್ನು ಎದುರಾಳಿ ತಂಡದ ರಕ್ಷಣಾ ಆಟಗಾರರು ಹಾಗೂ ಗೋಲ್‌ಕೀಪರ್ ವಿಫಲಗೊಳಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್ ತಂಡ 4-0 ಬಿಡಬ್ಲ್ಯುಎಸ್‌ಎಸ್‌ಬಿ ವಿರುದ್ಧ ಜಯ ಸಾಧಿಸಿತು. ಡೇವಿಡ್ ಅವರು ಪಂದ್ಯದ 27ನೇ ನಿಮಿಷದಲ್ಲಿ ಎಸ್‌ಡಬ್ಲ್ಯುಆರ್ ತಂಡಕ್ಕೆ ಮೊದಲ ಗೋಲು ತಂದಿತ್ತರು.ಅರುಣ್ ದಾಸ್ ಅವರು 45 ನೇ ನಿಮಿಷದಲ್ಲಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಆ ಬಳಿಕ ಅರುಲ್ (78)  ಹಾಗೂ ಜಾನ್ಸನ್ (79) ಚೆಂಡನ್ನು ಗುರಿ ಸೇರಿಸಿ ತಮ್ಮ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry