7

ಮೇಣದ ಬತ್ತಿ ತಯಾರಿಕೆ: ಕನಿಮೊಳಿ ಆಸಕ್ತಿ

Published:
Updated:

ನವ ದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಡಿಎಂಕೆ ಸಂಸದೆ ಕನಿಮೊಳಿ ಅವರು ಸಾಹಿತ್ಯ ಕೃತಿಗಳ ಓದಿನ ಜತೆಗೆ ಮೇಣದ ಬತ್ತಿ ತಯಾರಿಸುವುದಕ್ಕೆ ಸಂಬಂಧಿಸಿದಂತೆ ತರಬೇತಿಯನ್ನೂ ಪಡೆಯುತ್ತಿದ್ದಾರೆ.ಜೈಲಿನಲ್ಲಿರುವ ಇತರ ಮಹಿಳಾ ಕೈದಿಗಳೊಂದಿಗೆ ಕನಿಮೊಳಿ ಅವರು ಕುಳಿತು ಮೇಣದ ಬತ್ತಿ ತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಜೈಲಿನಲ್ಲಿರುವ ಇವರು ಮೇಣದ ಬತ್ತಿ ತಯಾರಿಕೆಯಲ್ಲಿ ಬಹಳ ಆಸಕ್ತಿ ತೋರುತ್ತಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.ತಿಹಾರ್ ಜೈಲಿನಲ್ಲಿ ಮೇಣದ ಬತ್ತಿ ತಯಾರಿಕೆಯನ್ನು ಜೈಲಿನಲ್ಲಿರುವ ಕೈದಿಗಳಿಗೆ ವೃತ್ತಿ ಶಿಕ್ಷಣವನ್ನಾಗಿ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry