ತ್ರಿಪುರಾ: ಪತ್ರಕರ್ತರ ಹತ್ಯೆ ತನಿಖೆಗೆ ಸಿಬಿಐ ಒಪ್ಪಿಗೆ

7

ತ್ರಿಪುರಾ: ಪತ್ರಕರ್ತರ ಹತ್ಯೆ ತನಿಖೆಗೆ ಸಿಬಿಐ ಒಪ್ಪಿಗೆ

Published:
Updated:

ಅರ್ಗತಲಾ: ತ್ರಿಪುರಾದಲ್ಲಿ ಕಳೆದ ವರ್ಷ ನಡೆದ ಇಬ್ಬರು ಪತ್ರಕರ್ತರ ಹತ್ಯೆ ಪ್ರಕರಣದ ತನಿಖೆ ನಡೆಸಲು ಸಿಬಿಐ ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್ ಕುಮಾರ್‌ ದೇವ್ ತಿಳಿಸಿದ್ದಾರೆ. 

ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಶಾಂತನು ಭೌಮಿಕ್‌, ತ್ರಿಪುರಾದ ಮಂಡೈನಲ್ಲಿ ನಡೆಯುತ್ತಿದ್ದ ಗಲಭೆಯ ವರದಿ ಮಾಡಲು 2017ರ ಸೆ.21ರಂದು ತೆರಳಿದ್ದಾಗ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. 

ಪ್ರಾದೇಶಿಕ ಪತ್ರಿಕೆಯೊಂದರಲ್ಲಿ ಅಪರಾಧ ಪ್ರಕರಣಗಳ ವರದಿ ಮಾಡುತ್ತಿದ್ದ ಮತ್ತೊಬ್ಬ ಪತ್ರಕರ್ತ ಸುದೀಪ್‌ ದತ್ತ ಭೌಮಿಕ್‌ ಅವರನ್ನು ಆರ್‌.ಕೆ.ನಗರದಲ್ಲಿರುವ ಸ್ಟೇಟ್‌ ರೈಫಲ್ಸ್‌ನ ಎರಡನೇ ಬೆಟಾಲಿಯನ್‌ನ ಕೇಂದ್ರ ಕಚೇರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ತ್ರಿಪುರಾ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸುದೀಪ್‌ ದತ್ತ ಭೌಮಿಕ್‌ ಕೊಲೆ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸ್ಥಗಿತಗೊಳಿಸಿದೆ.

ರಾಜ್ಯ ತನಿಖಾ ದಳವು (ಎಸ್ಐಟಿ) ಸುದೀಪ್‌ ಪ್ರಕರಣದ ತನಿಖೆ ನಡೆಸಿದ್ದು, ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದೆ. ಶಾಂತನು ಪ್ರಕರಣದ ತನಿಖೆಯನ್ನು ಸಹ ಎಸ್‌ಐಟಿ ನಡೆಸಿದ್ದು, ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ.

ಈ ಮಧ್ಯೆ ಎರಡೂ ಪ್ರಕರಣದ ತನಿಖೆ ನಡೆಸುವುದಾಗಿ ಸಿಬಿಐ ತಿಳಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !