ರೌಡಿ ಸೈಕಲ್ ರವಿಯ ಮನೆ ಮೇಲೆ ಸಿಸಿಬಿ ದಾಳಿ

7

ರೌಡಿ ಸೈಕಲ್ ರವಿಯ ಮನೆ ಮೇಲೆ ಸಿಸಿಬಿ ದಾಳಿ

Published:
Updated:
ಸೈಕಲ್ ರವಿ

ಬೆಂಗಳೂರು: ರೌಡಿ ಸೈಕಲ್ ರವಿಯನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಗುಂಡು ಹಾರಿಸಿ ಬಂಧಿಸಿರುವ ಸಿಸಿಬಿ ಪೊಲೀಸರು, ಆತನ ಮನೆ ಹಾಗೂ ಕಚೇರಿ ಮೇಲೆ ಗುರುವಾರ ದಾಳಿ ಮಾಡಿದರು.

ಆರು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ರವಿಕುಮಾರ್‌ ಅಲಿಯಾಸ್‌ ಸೈಕಲ್‌ ರವಿಯ ಮೇಲೆ, ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಆರ್.ಪ್ರಕಾಶ್ ಹಾಗೂ ಮಲ್ಲಿಕಾರ್ಜುನ್ ಅವರು ಬುಧವಾರ ಫೈರಿಂಗ್‌ ಮಾಡಿದ್ದರು. ಆತನ ಹೊಟ್ಟೆ ಹಾಗೂ ಬಲಗಾಲಿಗೆ ಹೊಕ್ಕಿದ್ದ ಗುಂಡುಗಳನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಗುರುವಾರ ಹೊರಗೆ ತೆಗೆದಿದ್ದಾರೆ. 

ಇತ್ತ, ಸಿಸಿಬಿ ಪೊಲೀಸರ ಮೂರು ವಿಶೇಷ ತಂಡಗಳು ರೌಡಿಯ ಮನೆ ಹಾಗೂ ಕಚೇರಿ ಮೇಲೂ ದಾಳಿ ಮಾಡಿದವು. ರೌಡಿಯ ಸಹಚರರ ಮನೆಯಲ್ಲೂ ರಾತ್ರಿಯಿಡಿ ಪರಿಶೀಲನೆ ನಡೆಸಿದವು. ದಾಳಿ ವೇಳೆಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎನ್ನಲಾಗಿದೆ. 

ರೌಡಿ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡಿನ ಹಲವು ಠಾಣೆಗಳಲ್ಲಿ 34 ಪ್ರಕರಣಗಳು ದಾಖಲಾಗಿವೆ. 20 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಆತ, ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅದೇ ಸಮಯದಲ್ಲಿ ಹಲವು ಅಪರಾಧಗಳನ್ನು ಎಸಗಿರುವ ಮಾಹಿತಿ ಇದೆ. ಅದನ್ನು ಖಚಿತಪಡಿಸಿಕೊಳ್ಳಲು ದಾಳಿ ಮಾಡಲಾಗಿದೆ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತಮಿಳುನಾಡಿನ ಕೃಷ್ಣಗಿರಿಯಲ್ಲಿ ರೌಡಿಯ ಮನೆಗಳಿವೆ. ಅಲ್ಲೆಲ್ಲ ಪರಿಶೀಲನೆ ಮಾಡಲಾಗಿದೆ. ತಿಂಗಳಿಗೊಮ್ಮೆ ಆತ ತನ್ನ ವಾಸ್ತವ್ಯ ಬದಲಿಸುತ್ತಿದ್ದ. ಆ ಸ್ಥಳಗಳನ್ನೂ ಪತ್ತೆ ಹಚ್ಚಿ ದಾಳಿ ಮಾಡಬೇಕಿದೆ ಎಂದರು.

ಗ್ಯಾಂಗ್‌ ಕಟ್ಟಿಕೊಂಡು ಕೃತ್ಯ: ಕೆ.ಪಿ. ಅಗ್ರಹಾರದ ನಿವಾಸಿಯಾದ ರವಿಯು ಕೆಂಗೇರಿಯ ಜಾನಿ ಮತ್ತು ಟಾಮಿ, ಕತ್ರಿಗುಪ್ಪೆಯ ಲಿಂಗ ಹಾಗೂ ಬೆಂಕಿ ಅಲಿಯಾಸ್ ವೆಂಕಿ ಕೊಲೆ ಪ್ರಕರಣದ ಆರೋಪಿ. ಆತನ ಹೆಸರನ್ನು 1998ರಲ್ಲೇ ಬನಶಂಕರಿ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು ಎಂದು ಹಿರಿಯ ಅಧಿಕಾರಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !