ಸಿಸಿಬಿ ದಾಳಿ; ₹3.5 ಕೋಟಿ ಮೌಲ್ಯದ ಟೋಕನ್ ಜಪ್ತಿ

7

ಸಿಸಿಬಿ ದಾಳಿ; ₹3.5 ಕೋಟಿ ಮೌಲ್ಯದ ಟೋಕನ್ ಜಪ್ತಿ

Published:
Updated:
Deccan Herald

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ ಬಳಿಯ ಆರ್‌.ಜಿ. ಹೋಟೆಲ್‌ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಜೂಜು ಅಡ್ಡೆ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ₹9.33 ಲಕ್ಷ ನಗದು ಹಾಗೂ ₹3.5 ಕೋಟಿ ಮೌಲ್ಯದ ಟೋಕನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ ತಂಡ ಈ ದಾಳಿ ನಡೆಸಿತು. ಹೋಟೆಲ್ ಸಿಬ್ಬಂದಿ ಸೇರಿದಂತೆ 47 ಮಂದಿಯನ್ನು ಬಂಧಿಸಿತು.

‘ಹಣದ ಮೌಲ್ಯಕ್ಕೆ ತಕ್ಕಂತೆ ಟೋಕನ್‌ಗಳನ್ನು ಬಳಸಿಕೊಂಡು ಈ ಅಡ್ಡೆಯಲ್ಲಿ ಜೂಜು ಆಡಲಾಗುತ್ತಿತ್ತು. ಸಿನಿಮಾ ನಿರ್ಮಾಪಕನೂ ಆದ ಫೈನಾನ್ಶಿಯರ್ ಕಪಾಲಿ ಮೋಹನ್‌, ಈ ಜೂಜು ಅಡ್ಡೆ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ದಾಳಿ ನಡೆಯುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಮಧ್ಯಮ ವರ್ಗದವರು ಹಾಗೂ ಶ್ರೀಮಂತರನ್ನು ವಿಮಾನದ ಮೂಲಕ ನಗರಕ್ಕೆ ಕರೆಸಿಕೊಳ್ಳುತ್ತಿದ್ದ ಮೋಹನ್, ಈ ಅಡ್ಡೆಯಲ್ಲಿ ಜೂಜು ಆಡಿಸುತ್ತಿದ್ದ. ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ, ಈ ಅಡ್ಡೆಯಲ್ಲಿ ಸೇರುತ್ತಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !