ಪರಿವಾರ, ತಳವಾರ ಎಸ್‌ಟಿಗೆ ಸೇರ್ಪಡೆ : ಸಂಭ್ರಮಾಚರಣೆ

7

ಪರಿವಾರ, ತಳವಾರ ಎಸ್‌ಟಿಗೆ ಸೇರ್ಪಡೆ : ಸಂಭ್ರಮಾಚರಣೆ

Published:
Updated:
Prajavani

ಚಾಮರಾಜನಗರ: ಪರಿವಾರ ಹಾಗೂ ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿ ಸಮುದಾಯದ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಗುರುವಾರ ಕ್ಷೀರಾಭಿಷೇಕ ಮಾಡಿದರು.

ನಗರದ ಭುವನೇಶ್ವರಿ ವೃತ್ತ ಮತ್ತು ಸಂತೇಮರಹಳ್ಳಿ ವೃತ್ತದಲ್ಲಿ ಕ್ಷೀರಾಭಿಷೇಕ ಮಾಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

‘ರಾಜ್ಯದ ನಾಯಕ ಜನಾಂಗದ 60 ವರ್ಷಗಳ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿರುವುದು ತುಂಬಾ ಸಂತಸ ತಂದಿದೆ. ಇದೊಂದು ಜನಾಂಗದ ಹೋರಾಟದ ಫಲವಾಗಿದೆ. ಇದಕ್ಕೆ ಮುಖ್ಯ ಕಾರಣಕರ್ತರಾದ ಯಡಿಯೂರಪ್ಪ, ಶ್ರೀರಾಮುಲು, ದಿವಗಂತ ಅನಂತ್‌ ಕುಮಾರ್, ಸಂಸದ ಪ್ರತಾಪ್ ಸಿಂಹ ಹಾಗೂ ಪ್ರತ್ಯೇಕವಾಗಿ, ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲ ನಾಯಕರಿಗೂ ಕೃತಜ್ಞತೆ ಸಲ್ಲುತ್ತದೆ’ ಎಂದರು.

ಎಸ್‌ಸಿ, ಎಸ್‌ಟಿಗೆ ಬೇರೆ ಬೇರೆ ಜಾತಿಗಳನ್ನು ಸೇರ್ಪಡೆ ಮಾಡಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಶೇ 30ರಷ್ಟು ಮೀಸಲಾತಿ ಹೆಚ್ಚಳ ಮಾಡುವಂತೆ ಪ್ರಧಾನಿ ಅವರಲ್ಲಿ ಮನವಿ ಮಾಲಾಗಿತ್ತು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ, ನಗರಸಭಾ ಸದಸ್ಯ ಶಿವರಾಜ್, ಮುಖಂಡರಾದ ಸಿ.ಎಸ್.ಸುರೇಶ್‌ ನಾಯಕ, ಚಿನ್ನಸ್ವಾಮಿ, ಸುಂದರ್‌ ರಾಜ್, ಯ.ರಾಜು ನಾಯಕ, ಮಹೇಶ್, ನಂಜುಂಡ ನಾಯಕ, ಎಂ.ಎಸ್. ಪೃಥ್ವಿರಾಜ್, ವೀರಶೈವ ಮುಖಂಡ ನಟರಾಜು, ಶಿವು ವಿರಾಟ್, ಬದನಗುಪ್ಪೆ ಶಿವರಾಂ, ನಾರಾಯಣ್, ಜ್ಯೋತಿಗೌಡನಪುರ ಮಹೇಶ್, ರಂಗಸ್ವಾಮಿ, ಚಂದ್ರು, ಬಸವಣ್ಣ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !