‘ನಾನು ಚಾಟ್ಸ್‌ ಪ್ರಿಯೆ’

7

‘ನಾನು ಚಾಟ್ಸ್‌ ಪ್ರಿಯೆ’

Published:
Updated:
Prajavani

‘ಬಿಗ್‌ಬಾಸ್‌’ ಮನೆಯಿಂದ ಹೊರ ಬಂದ ಮೇಲೆ ಜನರು ನನ್ನನ್ನು ಹೆಚ್ಚು ಗುರುತಿಸುತ್ತಿದ್ದಾರೆ. ಅಲ್ಲಿಂದ ಅಚಾನಕ್‌ ಆಗಿ ಹೊರಬಂದಿದ್ದಕ್ಕೆ ನಿಜವಾದ ಕಾರಣ ಗೊತ್ತಿಲ್ಲ. ನನಗೆ ಬೇರೆಯವರ ಜೊತೆ ಅಫೇರ್‌ ಇರಲಿಲ್ಲ. ನಾಟಕ ಆಡೋದು ಗೊತ್ತಿರಲಿಲ್ಲ. ನಾನು ನಾನಾಗೇ ಇದ್ದಿದ್ದರಿಂದ ಆಚೆ ಬಂದೆ ಅನ್ನಿಸುತ್ತೆ.

ನಾನು ಮನೆಯ ಊಟವನ್ನೇ ಹೆಚ್ಚು ಇಷ್ಟಪಡುತ್ತೇನೆ. ಹೊರಗಡೆ ಚಾಟ್ಸ್‌ ಮಾತ್ರ ತಿನ್ನುತ್ತೇನೆ. ಥಾಯ್‌ ಫುಡ್‌ ಅಂದ್ರೆ ಇಷ್ಟ. ಗಂಡ ಹಾಗೂ ಮಗಳಿಗೆ ನಾನೇ ಮನೆಯಲ್ಲಿ ಅಡುಗೆ ಮಾಡುತ್ತೇನೆ. ಮಗಳಿಗೆ ಇಷ್ಟ ಆಗಬೇಕು ಜೊತೆಗೆ ತಿಂಡಿ ಡಬ್ಬಕ್ಕೆ ಹಾಕಿ ಕಳಿಸಲು ಸರಿಹೊಂದುವ ತಿಂಡಿಯನ್ನೇ ಹೆಚ್ಚು ಮಾಡುತ್ತೇನೆ. ಉತ್ತರ ಭಾರತ ಶೈಲಿಯ ಅಡುಗೆಗಳನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಪುಲಾವ್‌, ಆಲೂ ಸಬ್ಜಿ,  ಫ್ರೈಡ್‌ರೈಸ್‌, ವೆಜ್‌ ಬಿರಿಯಾನಿ, ಗೀ ರೈಸ್‌ ಹೆಚ್ಚಾಗಿ ಮಾಡುತ್ತೇನೆ.

ಗಂಡನಿಗೆ ಲೈಟ್ ಫುಡ್‌ ಇಷ್ಟ. ರಸಂ, ಬೇಳೆಸಾರು ಇಷ್ಟಪಡುತ್ತಾರೆ. ನನಗೆ ಬೂದುಗುಂಬಳ ಮಜ್ಜಿಗೆ ಹುಳಿ ಇಷ್ಟ. ಈರುಳ್ಳಿ ಗೊಜ್ಜು ಕೂಡ ಇಷ್ಟ. ನಾನೇ ಎಲ್ಲವನ್ನೂ ಮಾಡುತ್ತೇನೆ. ಆದರೆ ಅಮ್ಮ ಮಾಡಿದ ಈರುಳ್ಳಿ ಗೊಜ್ಜು ಹೆಚ್ಚು ಇಷ್ಟ. 

ಬ್ರಾಹ್ಮಣರ ಮನೆಯಲ್ಲಿ ಆಗಬೇಕಾದ ಎಲ್ಲಾ ಅಡುಗೆಗಳೂ ನಮ್ಮ ಮನೆಯಲ್ಲಿ ಆಗುತ್ತವೆ. ಹೊರಗೆ ಹೋಗಿ ತಿನ್ನೋದರಿಂದ ಆರೋಗ್ಯ ಏರುಪೇರು ಆಗುತ್ತದೆ. ನಾನು ಹೊರಗಡೆಯ ಚಾಟ್ಸ್‌ ತಿನ್ನುತ್ತೇನೆ. ಮನೆಯಲ್ಲಿ ಚಾಟ್ಸ್‌ ಮಾಡುವ ಅಭ್ಯಾಸ ಇಲ್ಲ. ಮಸಾಲೆಪುರಿಯಲ್ಲಿ  ಬರೀ ಮಸಾಲೆ, ಈರುಳ್ಳಿ ಮಾತ್ರ ಹಾಕಿಸಿಕೊಂಡು ತಿನ್ನುತ್ತೇನೆ. ಬೇರೆ ಚಾಟ್ಸ್‌ಗಳಲ್ಲೂ ಕರಿದ ಪದಾರ್ಥಗಳನ್ನು ಬಹುತೇಕ ತಿನ್ನುವುದೇ ಇಲ್ಲ. ನನಗೆ ಸಿಹಿ ಪದಾರ್ಥಗಳು ಸ್ವಲ್ಪವೂ ಇಷ್ಟ ಆಗಲ್ಲ. ಖಾರ ಮಾತ್ರ ಇಷ್ಟ. ಚಾಕ್ಲೆಟ್‌, ಐಸ್‌ ಕ್ರೀಂನಿಂದ ಸಾಕಷ್ಟು ದೂರ.

ಫಿಟ್‌ನೆಸ್‌ ಮಂತ್ರ: ಈಗಿನ ಕಾಲದಲ್ಲಿ ಫಿಟ್‌ನೆಸ್‌ ತುಂಬಾ ಮುಖ್ಯ. ನನಗೆ ಡಾನ್ಸ್‌ ಗೀಳು ಹೆಚ್ಚು. ಬಾಲಿವುಡ್‌ ಜುಂಬಾಗೆ ಸೇರಿಕೊಂಡಿದ್ದೇನೆ. ದಿನಕ್ಕೆ ಒಂದು ತಾಸು ವಾಕಿಂಗ್‌ ಮಾಡುತ್ತೇನೆ.

ಬೆಳಿಗ್ಗೆ ಏರೋಬಿಕ್ಸ್‌ಗೂ ಹೋಗುತ್ತೇನೆ. ತಿನ್ನುವುದನ್ನೂ ಕಂಟ್ರೋಲ್‌ ಮಾಡೋದ್ರಿಂದ ಸದ್ಯದವರೆಗೂ ಫಿಟ್‌ನೆಸ್‌ಗೆ ಕಾಪಾಡಿಕೊಂಡಿದ್ದೇನೆ.

ಬೂದುಗುಂಬಳ ಮಜ್ಜಿಗೆ ಹುಳಿ

ನಾಲ್ಕು ಚಮಚದಷ್ಟು ಕಡಲೆಬೇಳೆಯನ್ನು ಮೂರು ತಾಸು ನೆನೆಸಿಡಿ. ಬೂದು ಗುಂಬಳವನ್ನು ಸಣ್ಣದಾಗಿ ಹೆಚ್ಚಿ ನೀರಿನಲ್ಲಿ ಬೇಯಿಸಿಕೊಳ್ಳಿ, ನೆನೆದಿರೋ ಕಡಲೆಬೇಳೆ ಜೊತೆ ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕರಿಂದ ಐದು ಹಸಿ ಮೆಣಸಿನಕಾಯಿ, ಜೀರಿಗೆ, ಸ್ವಲ್ಪ ತೆಂಗಿನಕಾಯಿ ಹಾಕಿ ರುಬ್ಬಿಕೊಳ್ಳಿ. 

ಬೇಯಿಸಿರೋ ಬೂದುಗುಂಬಳದ ಜೊತೆ ರುಬ್ಬಿರುವ ಮಿಶ್ರಣ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಸ್ವಲ್ಪ ಹುಳಿ ಇರುವ ಮೊಸರನ್ನು ಹಾಕಿ ಕೆಲವು ಸೆಕೆಂಡುಗಳ ಬಳಿಕ ಗ್ಯಾಸ್‌ ಆಫ್‌ ಮಾಡಬೇಕು. ಮೊಸರು ಹಾಕಿದ ಬಳಿಕ ಹೆಚ್ಚು ಕುದಿಸಬಾರದು. ನಂತರ ಇಂಗು ಹಾಕಿ ಒಗ್ಗರಣೆ ಹಾಕಿದರೆ ಬೂದುಗುಂಬಳ ಮಜ್ಜಿಗೆ ಹುಳಿ ಸವಿಯಲು ಸಿದ್ಧ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !