ಜನಪರ ಬಜೆಟ್‌: ಸಿಹಿ ಹಂಚಿ ಬಿಜೆಪಿ ಸಂಭ್ರಮಾಚರಣೆ

7

ಜನಪರ ಬಜೆಟ್‌: ಸಿಹಿ ಹಂಚಿ ಬಿಜೆಪಿ ಸಂಭ್ರಮಾಚರಣೆ

Published:
Updated:
Prajavani

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರವಾದ ಬಜೆಟ್‌ ಮಂಡಿಸಿದೆ ಎಂದು ಸಂತಸ ವ್ಯಕ್ತಪಡಿಸುತ್ತ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶನಿವಾರ ಸಂಭ್ರಮಾಚರಣೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ ಮಾತನಾಡಿ, ‘ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಅವರು ಇದೇ ಮೊದಲು ಬಜೆಟ್‌ ಮಂಡಿಸಿದ್ದಾರೆ. ಇದರಲ್ಲಿನ ಜನಪರ ಯೋಜನೆಗಳನ್ನು ದೇಶ ಹಾಗೂ ರಾಜ್ಯದ ಜನಸಾಮಾನ್ಯರು ಸ್ವೀಕರಿಸಿದ್ದಾರೆ. ಮೋದಿ ಅವರು ನುಡಿದಂತೆ ನಡೆದುಕೊಂಡಿದ್ದಾರೆ’ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಭಿವೃದ್ಧಿಗೆ ಒತ್ತು ನೀಡಲಾಗಿದೆ. ರೈತರು, ಗಡಿ ಸೈನಿಕರು ಸೇರಿದಂತೆ ಎಲ್ಲ ದಿಕ್ಕಿನಲ್ಲೂ ಚಿಂತನೆ ನಡೆಸಿ ಮುಂಗಡ ಬಜೆಟ್‌ ಮಂಡಿಸಲಾಗಿದೆ. ಭಾರಿ ನಿರೀಕ್ಷೆಯ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹ 2.5 ಲಕ್ಷದಿಂದ ₹ 5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಇದರಿಂದ ಅನೇಕ ತೆರಿಗೆ ಪಾವತಿದಾರರ ನಿರೀಕ್ಷೆಯನ್ನು ಗೋಯಲ್‌ ಅವರು ಪೂರೈಸಿದ್ದಾರೆ ಎಂದರು

ಟೀಕೆಗೆ ಅವಕಾಶವಿಲ್ಲ: ದೇಶದ ರಕ್ಷಣೆ ಮಾಡುವ ಸೈನಿಕರಿಗೆ, ದೇಶದ ಬೆನ್ನೆಲುಬು ರೈತರಿಗೆ, ತೆರಿಗೆದಾರರಿಗೆ ಒಟ್ಟಾರೆ ರಾಷ್ಟ್ರದ ಎಲ್ಲ ಜನರಿಗೂ ಅನುಕೂಲವಾಗುವಂತಹ ಬಜೆಟ್‌ ಮಂಡನೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕೆ ಮಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಟೀಕೆ ಮಾಡಲು ವಿಷಯವೇ ಇಲ್ಲ ಎಂದರು.

ಬಜೆಟ್‌ನಲ್ಲಿ ಉತ್ತಮವಾದ ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ‘ಸಬ್‌ ಕಾ ಸಾತ್‌ ದೇಶ್‌ ಕಾ ವಿಕಾಸ್’ ಎಂಬಂತೆ ಮೋದಿ ಸರ್ಕಾರ ಜನಪರ ಯೋಜನೆ ಜಾರಿಗೊಳಿಸಿದೆ ಎಂದ ಅವರು, ಈ ಸಂಭ್ರಮಾಚರಣೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದಿಂದ ನಡೆಯುತ್ತಿದೆ ಎಂದರು. 

ಪಕ್ಷದ ಪ್ರಧಾನ ಕಾರ್ಯದರ್ಶಿ ಪುಟ್ಟರಸು, ಕಾರ್ಯದರ್ಶಿ ಪೃಥ್ವಿರಾಜ್‌, ನಗರಸಭಾ ಸದಸ್ಯ ರಾಘವೇಂದ್ರ, ಮುಖಂಡರಾದ ಪುರುಷೋತ್ತಮ್, ಚಂದ್ರಶೇಖರ್, ನಾಗೇಶ ನಾಯಕ, ಪ್ರಶಾಂತ್‌, ಮಹೇಶ್‌ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !