ಕ್ರಿಕೆಟ್‌ ತರಬೇತಿಗಾಗಿ ಸರಗಳವು

7
ಜಯನಗರ ಪೊಲೀಸರಿಂದ ಬಾಲ್ಯ ಸ್ನೇಹಿತರಿಬ್ಬರ ಬಂಧನ

ಕ್ರಿಕೆಟ್‌ ತರಬೇತಿಗಾಗಿ ಸರಗಳವು

Published:
Updated:

ಬೆಂಗಳೂರು: ಕ್ರಿಕೆಟ್‌ ತರಬೇತಿ ಪಡೆಯುವುದಕ್ಕಾಗಿ ಹಣ ಹೊಂದಿಸಲು ಸರಗಳವು ಮಾಡುತ್ತಿದ್ದ ಆರೋಪದಡಿ ಬಾಲ್ಯ ಸ್ನೇಹಿತರಿಬ್ಬರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಲಿಂಗರಾಜಪುರದ ಬಾಲಕುಮಾರ್ (19) ಹಾಗೂ ನವೀನ್ ಶೆಟ್ಟಿ (19) ಬಂಧಿತರು. ₹27 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

‘ಕ್ರಿಕೆಟ್ ತರಬೇತಿ ಬಗ್ಗೆ ವಿಚಾರಿಸಲು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ‘ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ ಕ್ರಿಕೆಟ್ (ಕೆಐಒಸಿ)’ ಅಕಾಡೆಮಿಗೆ ಹೋಗಿದ್ದರು. ತರಬೇತಿಗೆ ತಿಂಗಳಿಗೆ ₹30 ಸಾವಿರ ಶುಲ್ಕ ಕೇಳಿದ್ದರು. ಹಣವನ್ನು ಹೊಂದಿಸುವುದಕ್ಕಾಗಿ ಸರಗಳವು ಮಾಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

ಸ್ನೇಹಿತನಿಂದಲೇ ತರಬೇತಿ: ‘ಹಣ ಬೇಕಿರುವುದಾಗಿ ಆರೋಪಿಗಳು, ಸ್ನೇಹಿತ ಸಗಾಯ್‌ ಎಂಬಾತನಿಗೆ ಹೇಳಿದ್ದರು. ಅಪರಾಧ ಹಿನ್ನೆಲೆಯುಳ್ಳವನಾದ ಆತನೇ ಸರಗಳವು ಮಾಡುವಂತೆ ಸೂಚಿಸಿದ್ದ. ಲಿಂಗರಾಜಪುರದ ಚಾರ್ಲ್ಸ್ ಆಟದ ಮೈದಾನದಲ್ಲಿ ತರಬೇತಿ ಸಹ ನೀಡಿದ್ದ. ಆತನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ವಿವರಿಸಿದರು.

‘ಕೃತ್ಯಕ್ಕಾಗಿ ಆರೋಪಿಗಳು, ಜಯನಗರದ ವಿನಯ್ ಎಂಬುವರ ದ್ವಿಚಕ್ರ ವಾಹನ ಕದ್ದಿದ್ದರು. ಕಪ್ಪು ಬಣ್ಣದ ಹೆಲ್ಮೆಟ್‌ ಹಾಗೂ ಜಾಕೆಟ್‌ ಧರಿಸಿ ಕೃತ್ಯ ಎಸಗುತ್ತಿದ್ದರು’ ಎಂದು ಹೇಳಿದರು.

‘ಅಕ್ಕನ ಮದುವೆಗಾಗಿ ಕೃತ್ಯ’: ‘ಅಕ್ಕನ ಮದುವೆ ಮಾಡಿಸುವ ಕನಸಿತ್ತು. ಅದಕ್ಕಾಗಿ ಹಣ ಹೊಂದಿಸಲು, ಸ್ನೇಹಿತ ಬಾಲಕುಮಾರ್‌ ಜತೆ ಕೃತ್ಯ ಎಸಗಲು ಒಪ್ಪಿಕೊಂಡೆ’ ಎಂದು ನವೀನ್‌ ಶೆಟ್ಟಿ, ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !