ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವನಾರಾಯಣ ಆಸ್ತಿ ದುಪ್ಪಟ್ಟು!

ಚರಾಸ್ತಿ– ₨ 91.82 ಲಕ್ಷ; ಸ್ಥಿರಾಸ್ತಿ– ₨ 2.22 ಕೋಟಿ
Last Updated 18 ಜೂನ್ 2018, 13:57 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ(ಪರಿಶಿಷ್ಟ ಜಾತಿ) ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಆರ್‌. ಧ್ರುವನಾರಾಯಣ ಅವರ ಆಸ್ತಿಯು ಐದೇ ವರ್ಷದಲ್ಲಿ ದುಪ್ಪಟ್ಟಾಗಿದೆ!

ಧ್ರುವನಾರಾಯಣ ಅವರಿಗೆ ಈಗ 53 ವರ್ಷ. 1986–87ರ ಅವಧಿಯಲ್ಲಿ ಅವರು ಬೆಂಗಳೂರು ಕೃಷಿ ವಿವಿಯಲ್ಲಿ ಎಂಎಸ್‌ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಅವರು ಒಂದು ಪೆಟ್ರೋಲ್‌ ಬಂಕ್‌ನ ಒಡೆಯರು ಹೌದು.

2009ರ ಲೋಕಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಅವರ ಚರಾಸ್ತಿ ಮೌಲ್ಯ ರೂ 47,88,019 ಇತ್ತು. ಸ್ಥಿರಾಸ್ತಿ ಮೌಲ್ಯ ರೂ 1.13 ಕೋಟಿ ಇತ್ತು. ಅವರು ಒಟ್ಟು ರೂ 1,60,88,019 ಮೌಲ್ಯದ ಆಸ್ತಿ ಹೊಂದಿದ್ದರು.

16ನೇ ಲೋಕಸಭಾ ಚುನಾವಣೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರ ಚರಾಸ್ತಿಯು ರೂ 91,82,564 ಇದೆ. ಜತೆಗೆ, ರೂ 2.22 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಗುಂಡ್ಲುಪೇಟೆ ಕ್ಷೇತ್ರದ ಮತದಾರರಾಗಿದ್ದಾರೆ.

2012–13ನೇ ಸಾಲಿಗೆ ಒಟ್ಟು ರೂ 30,32,415ಕ್ಕೆ ಆದಾಯ ತೆರಿಗೆ ಘೋಷಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಬಳಿ ರೂ 10 ಲಕ್ಷ ನಗದು ಇದೆ. ಯಲಹಂಕದ ಕೆನರಾ ಬ್ಯಾಂಕ್‌ನಲ್ಲಿ ₨ 7,25,618, ಚಾಮರಾಜನಗರದ ವಿಜಯ ಬ್ಯಾಂಕ್‌ನಲ್ಲಿ ರೂ 2,88,326, ಅಫೆಕ್ಸ್ ಬ್ಯಾಂಕ್‌ನಲ್ಲಿ ರೂ 21,059, ಯಲಹಂಕದ ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ರೂ1.90 ಲಕ್ಷ, ದೆಹಲಿಯ ಎಸ್‌ಬಿಐನಲ್ಲಿ ₨ 1,43,591, ಚಾಮರಾಜನಗರದ ವಿಜಯ ಬ್ಯಾಂಕ್‌ನಲ್ಲಿ   ₨ 16,01,000, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ₨ 3,393 ಇದೆ.

ಅವರ ಬಳಿ ಚಿನ್ನಾಭರಣ ಇಲ್ಲ. ಧ್ರುವನಾರಾಯಣ ಅವರ ಬಳಿ  ರೂ 4,36,899 ಮೌಲ್ಯದ ಸ್ಕ್ರಾಪಿಯೊ ವಾಹನ ಹಾಗೂ ರೂ 11 ಲಕ್ಷ ಮೌಲ್ಯದ ಇನೋವಾ ವಾಹನ ಇದೆ. ರೂ 35.50 ಲಕ್ಷ ಮೊತ್ತವನ್ನು ಬಿಸಿನೆಸ್‌ನಲ್ಲಿ ತೊಡಗಿಸಿದ್ದಾರೆ.
ಹೆಗ್ಗವಾಡಿ ಬಳಿ 10.15 ಎಕರೆ, ಭುಜಂಗನಪುರದ ಬಳಿ 5.05 ಎಕರೆ, ಕೆರೆಹಳ್ಳಿ ಬಳಿ 3.17 ಎಕರೆ ಜಮೀನು ಹೊಂದಿದ್ದಾರೆ. ಇದು ಅವರ ಪಿತ್ರಾರ್ಜಿತ ಆಸ್ತಿ 

ರೂ1.50 ಕೋಟಿ ಮನೆ: ಮೈಸೂರಿನ ವಿಜಯನಗರದ 4ನೇ ಹಂತದಲ್ಲಿ 50*80 ಅಳತೆಯ ನಿವೇಶನವಿದೆ. ಇದರಲ್ಲಿ 3,853 ಅಡಿಯಡಿ ಮನೆ ನಿರ್ಮಿಸಿದ್ದಾರೆ.  ಈ ನಿವೇಶನ ಅವರಿಗೆ ಕೊಡುಗೆಯಾಗಿ ಬಂದಿದೆ. ₨ 49,33,192 ಮೊತ್ತದಲ್ಲಿ ಮನೆ ನಿರ್ಮಿಸಿದ್ದು, ಪ್ರಸ್ತುತ ಮನೆಯ ಮಾರುಕಟ್ಟೆ ಮೌಲ್ಯ ₨ 1.50 ಕೋಟಿ! ಹೆಗ್ಗವಾಡಿಯಲ್ಲಿ ಸ್ವಂತ ಮನೆ ಹೊಂದಿದ್ದು, ಇದರ ಮೌಲ್ಯ ₨ 5 ಲಕ್ಷ.

ಸಾಲದ ವಿವರ: ಕೆನರಾ ಬ್ಯಾಂಕ್‌ನಲ್ಲಿ ಮನೆ ನಿರ್ಮಾಣಕ್ಕಾಗಿ ₨ 13,45,059 ಸಾಲ ಪಡೆದಿದ್ದಾರೆ. ಜತೆಗೆ, ಅದೇ ಬ್ಯಾಂಕ್‌ನಲ್ಲಿ ವಾಹನಕ್ಕಾಗಿ ₨ 6,14,759 ಸಾಲ ಪಡೆದಿದ್ದಾರೆ. ವಿಜಯ ಬ್ಯಾಂಕ್‌ನಲ್ಲಿ ₨ 6.46 ಲಕ್ಷ ಕೃಷಿ ಸಾಲ ಪಡೆದಿದ್ದಾರೆ. ಅವರ ಮೇಲೆ ಒಟ್ಟು ರೂ 26,05,818 ಸಾಲವಿದೆ.

ಪತ್ನಿಯ ಆಸ್ತಿ ವಿವರ: ಧ್ರುವನಾರಾಯಣ ಅವರ ಪತ್ನಿ ಆರ್‌. ವೀಣಾ ₨ 11,37,072 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಬಳಿ ₨ 2 ಲಕ್ಷ ನಗದು ಇದೆ. 116 ಗ್ರಾಂ. ಚಿನ್ನಾಭರಣ ಇದೆ. ಜೆನ್‌ ಕಾರು ಹೊಂದಿದ್ದಾರೆ. ಅವರ ಹೆಸರಿನಲ್ಲಿ ಯಾವುದೇ ಚರಾಸ್ತಿ ಇಲ್ಲ.

ಅವರ ಪುತ್ರ ಡಿ. ದರ್ಶನ್‌ ₨ 1,32,394 ಚರಾಸ್ತಿ ಹೊಂದಿದ್ದಾರೆ. ಇನ್ನೊಬ್ಬ ಪುತ್ರ ಧಿರೇನ್‌ ಬಳಿಯಲ್ಲಿ ₨ 1,74,549 ಚರಾಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT