ಮಂಗಳವಾರ, ಏಪ್ರಿಲ್ 13, 2021
30 °C
ಚಾಮುಂಡೇಶ್ವರಿ ವರ್ಧಂತ್ಯುತ್ಸವ ಇಂದು; ಸಕಲ ಸಿದ್ಧತೆ

ದೇವಿ ದರ್ಶನಕ್ಕೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರವಿಂದು (ಜುಲೈ 24, ಬುಧವಾರ). ಈ ಶುಭ ನಕ್ಷತ್ರದಲ್ಲಿ ಚಾಮುಂಡೇಶ್ವರಿಯ ವರ್ಧಂತ್ಯುತ್ಸವ ನಡೆಯಲಿದೆ.

ವರ್ಧಂತ್ಯುತ್ಸವದ ಸುದಿನದಂದು ಬೆಟ್ಟದ ತಾಯಿಯ ದರ್ಶನ ಪಡೆಯಲು ಅಸಂಖ್ಯಾತ ಭಕ್ತರು ಕಾತರರಾಗಿದ್ದು, ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ.

ಚಾಮುಂಡೇಶ್ವರಿಯ ವರ್ಧಂತ್ಯುತ್ಸವವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲು ದೇಗುಲದ ಆಡಳಿತ ಮಂಡಳಿಯೂ ಸಕಲ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಆಷಾಢದ ಜಿಟಿಜಿಟಿ ಮಳೆಗೆ ಭಕ್ತರು ತೊಯ್ಯಬಾರದು ಎಂದು ಸರತಿ ಸಾಲಿಗೆ ಶಾಮಿಯಾನ ಹಾಕಲಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರಿನ ನಿರ್ಮಲ ಫ್ಲವರ್‌ ಗ್ರೂಪ್‌ ವತಿಯಿಂದ ದೇಗುಲಕ್ಕೆ ಸಂಪೂರ್ಣ ಪುಷ್ಪಾಲಂಕಾರ ಮಾಡಲಾಗಿದೆ. ಗರ್ಭಗುಡಿ, ಪ್ರಾಂಗಣ ಸೇರಿದಂತೆ ಇಡೀ ದೇಗುಲವೇ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ.’

‘ಗುಲಾಬಿ, ಸೇವಂತಿಗೆ, ಚೆಂಡು, ಮಲ್ಲಿಗೆ, ಕನಕಾಂಬರ, ತುಳಸಿ ಸೇರಿದಂತೆ ಬಗೆಬಗೆಯ ಪುಷ್ಪಗಳನ್ನು ಅಲಂಕಾರಕ್ಕೆ ಬಳಸಲಾಗಿದೆ. ಈ ಬಾರಿ ಅಲಂಕಾರಕ್ಕೆ ಕಬ್ಬನ್ನು ಬಳಸಿದ್ದಾರೆ. ದೇಗುಲದ ಗೋಡೆಗಳಿಗೆ ಕಬ್ಬಿನ ಜಲ್ಲೆ ಕಟ್ಟಿದ್ದಾರೆ. ಇದರ ಜತೆಗೆ ಬಾಳೆಯ ಕಂಬ, ಮಾವಿನ ತಳಿರಿನ ತೋರಣವೂ ಮೆರುಗು ಹೆಚ್ಚಿಸಿದೆ’ ಎಂದು ತಿಳಿಸಿದರು.

ಚಾಮುಂಡೇಶ್ವರಿ ವರ್ಧಂತ್ಯುತ್ಸವಕ್ಕೆ ನಗರವೂ ಸೇರಿದಂತೆ ಬೆಟ್ಟಕ್ಕೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಶುಭಾಶಯ ಕೋರುವ ಫ್ಲೆಕ್ಸ್‌, ಬ್ಯಾನರ್ ಅಳವಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.