ಚಂದಕವಾಡಿ: ವೈಭವದ ಲಕ್ಷ್ಮೀದೇವಿ ರಥೋತ್ಸವ

ಭಾನುವಾರ, ಮಾರ್ಚ್ 24, 2019
27 °C

ಚಂದಕವಾಡಿ: ವೈಭವದ ಲಕ್ಷ್ಮೀದೇವಿ ರಥೋತ್ಸವ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಗ್ರಾಮದ ಲಕ್ಷ್ಮೀದೇವಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. 

ಬುಧವಾರ ಕೊಂಡೋತ್ಸವದ ಮೂಲಕ ಜಾತ್ರೆ ಆರಂಭವಾಗಿತ್ತು. ಜಾತ್ರೆಯ ಅಂಗವಾಗಿ ಗುರುವಾರ ಮಡೆ ಉತ್ಸವ ಹಾಗೂ ದನಗಳ ಪರಿಷೆ ನಡೆದಿತ್ತು. ಶುಕ್ರವಾರ ಸಂಜೆ ರಥೋತ್ಸವದ ಮೂಲಕ ಮೂರು ದಿನಗಳ ಜಾತ್ರೆ ಸಂಪನ್ನಗೊಂಡಿತು. 

ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ, ಚಂದಕವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ  ನೂರಾರು ಮಹಿಳೆಯರು, ದೇವಸ್ಥಾನದ ಆವರಣದಲ್ಲಿ ಬೆಲ್ಲದ ಅನ್ನ ತಯಾರಿಸಿ ದೇವಿಗೆ ಸಮರ್ಪಿಸಿ ಹರಕೆ ತೀರಿಸಿದರು.

ರಥೋತ್ಸವ: ಸಂಜೆ 5.30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. 200 ಮೀಟರ್‌ ತೇರು ಸುತ್ತಾಡಿದ ಬಳಿಕ ಸ್ವಸ್ಥಾನಕ್ಕೆ ತಲುಪಿತು. ಇದಕ್ಕೂ ಮೊದಲು ಲಕ್ಷ್ಮೀದೇವಿಯ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಛತ್ರಿ, ಚಾಮರಗಳು ರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. 

ಹರಕೆ ಹೊತ್ತವರು ಕೊಂಡಕ್ಕೆ ಉಪ್ಪು ಚೆಲ್ಲಿ ವಿಭೂತಿ ಹಾಕಿಕೊಂಡು ಹರಕೆ ತೀರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !