ಎಟಿಎಂನಿಂದ ₹ 20 ಸಾವಿರ ಡ್ರಾ ಮಾಡಿ ವಂಚನೆ

7

ಎಟಿಎಂನಿಂದ ₹ 20 ಸಾವಿರ ಡ್ರಾ ಮಾಡಿ ವಂಚನೆ

Published:
Updated:

ಬೆಂಗಳೂರು: ಪೀಣ್ಯದ ದೊಡ್ಡಬಿದರಕಲ್ಲು ಬಸ್‌ ನಿಲ್ದಾಣದ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿಕೊಡುವಂತೆ ಸಹಾಯ ಕೇಳಿದ ಸರೋಜಮ್ಮ ಎಂಬುವರಿಗೆ ಅಪರಿಚಿತ ವ್ಯಕ್ತಿಯೊಬ್ಬ ₹ 20 ಸಾವಿರ ಹಣ ವಂಚಿಸಿ ಪರಾರಿಯಾಗಿದ್ದಾನೆ.

ಮಂಗಳವಾರ (ಸೆ.4) ರಾತ್ರಿ ಘಟನೆ ನಡೆದಿದ್ದು, ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರೋಜಮ್ಮ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದರು. ಆದರೆ ಅವರಿಂದ ಹಣ ಡ್ರಾ ಮಾಡಲು ಆಗಲಿಲ್ಲ. ಅಲ್ಲೇ ಇದ್ದ ವ್ಯಕ್ತಿಯ ನೆರವು ಕೋರಿದ್ದರು.

‘ಎಟಿಎಂ ಕಾರ್ಡ್‌ ಮತ್ತು ಪಿನ್‌ ನಂಬರ್‌ ಪಡೆದುಕೊಂಡಿದ್ದ ಆತ, ಡ್ರಾ ಆದ ಹಣವನ್ನು ಸರೋಜಮ್ಮ ಅವರಿಗೆ ಕಾಣದಂತೆ ಮರೆಮಾಚಿ ಇಟ್ಟುಕೊಂಡು, ಈ ಎಟಿಎಂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬೇರೊಂದು ಎಟಿಎಂನಲ್ಲಿ ಪ್ರಯತ್ನಿಸಿ ಎಂದಿದ್ದ’ ಎಂದು ಮಹಿಳೆ ದೂರಿದ್ದಾರೆ.

‘ಬೇರೊಂದು ಎಟಿಎಂನಲ್ಲಿ ಸರೋಜಮ್ಮ ಮತ್ತೊಬ್ಬ ವ್ಯಕ್ತಿಯ ಸಹಾಯ ಪಡೆದಿದಾಗ ಈಗಾಗಲೇ ಹಣ ಡ್ರಾ ಆಗಿದೆ ಅವರು ಹೇಳಿದ್ದಾರೆ.‌ ಎಟಿಎಂನಲ್ಲಿದ್ದ ಸಿ.ಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಆರೋಪಿಗಾಗಿ ಶೋಧ ನಡೆಯುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !