ದುಶ್ಚಟಕ್ಕೆ ಯುವಕರು ಬಲಿಯಾಗದಿರಿ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

‘ಕ್ಷಯರೋಗ ಮುಕ್ತ ಹಳ್ಳಿ ಮಲ್ಲೇಪಲ್ಲಿ ಗ್ರಾಮ’ದಲ್ಲಿ ಜಾಗೃತಿ ಕಾರ್ಯಕ್ರಮ

ದುಶ್ಚಟಕ್ಕೆ ಯುವಕರು ಬಲಿಯಾಗದಿರಿ

Published:
Updated:
Prajavani

ಚೇಳೂರು: ಯುವಕರು ದುಶ್ಚಟಗಳಿಗೆ ಬಲಿ ಆಗಬಾರದು. ಮಾರಣಾಂತಿಕ ಕ್ಷಯರೋಗಕ್ಕೆ ತುತ್ತಾಗದೆ ಗ್ರಾಮಕ್ಕೆ ಮಾದರಿ ಆಗಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಯಲ್ಲ ರಮೇಶ್ ಬಾಬು ನುಡಿದರು.

ಗುರುವಾರ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ‘ಕ್ಷಯರೋಗ ಮುಕ್ತ ಹಳ್ಳಿ ಮಲ್ಲೇಪಲ್ಲಿ ಗ್ರಾಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಯರೋಗ ಇರುವ ಒಬ್ಬ ವ್ಯಕ್ತಿಯಿಂದ ಒಂದು ವರ್ಷದೊಳಗೆ ಸುಮಾರು 25 ಮನೆಗಳಿಗೆ ಕ್ಷಯರೋಗ ಬ್ಯಾಕ್ಟೀರಿಯಾಗಳು ಹರಡುತ್ತವೆ. ಕ್ಷಯರೋಗ ಇರುವ ಒಬ್ಬ ವ್ಯಕ್ತಿಗೆ 6 ತಿಂಗಳು ಚಿಕಿತ್ಸೆ ನೀಡಿದರೆ ಸರ್ಕಾರಕ್ಕೆ ₹ 5 ರಿಂದ 6 ಲಕ್ಷ ಖರ್ಚು ಬರುತ್ತದೆ ಎಂದರು.

5 ವರ್ಷಗಳ ಅವಧಿಯಲ್ಲಿ ಯಾವುದೇ ಕ್ಷಯರೋಗ ಪತ್ತೆಯಾಗದ ಮಲ್ಲೇಪಲ್ಲಿ ಗ್ರಾಮವನ್ನು ಕ್ಷಯರೋಗ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ. ಗ್ರಾಮಸ್ಥರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿ ಸಿ.ಎ.ಸತ್ಯನಾರಾಯಣರೆಡ್ಡಿ ಮಾತನಾಡಿ, ‘ಕ್ಷಯರೋಗ ಗಂಭೀರ ಕಾಯಿಲೆ. ಬೆಂಕಿಗೆ ಸಮಾನ. ಇದು ಅಕ್ಕ ಪಕ್ಕದವರಿಗೂ ವ್ಯಾಪಿಸುತ್ತದೆ. ಈ ಕಾಯಿಲೆಯು ಕಾಣಿಸಿಕೊಂಡ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು. ನಿಮ್ಮ ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ಶೈಲಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ರೋಗಿಯ ಖಾತೆಗೆ ನೇರವಾಗಿ ಪ್ರತಿ ತಿಂಗಳು ₹ 500 ನೀಡಲಾಗುತ್ತದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 280 ಗ್ರಾಮಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದರು.

 ಗ್ರಾಮದ ಸ್ವಾತಿ ಮತ್ತು ಅಲ್ಪಿಯಾ ಮಾತನಾಡಿದರು. ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಶಿರೀಷ್ ಕಶ್ಯಪ್, ತಾಲ್ಲೂಕು ಮೇಲ್ವಿಚಾರಕರಾದ ಮಂಜುನಾಥ್, ವೆಂಕಟನರಸಪ್ಪ, ಗ್ರಾ.ಪಂ ಸದಸ್ಯ ಪಿ.ವಿ.ವೆಂಕಟರಮಣರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರರೆಡ್ಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಸ್.ಕೆ.ಮಂಜುನಾಥ್, ಸಿಬ್ಬಂದಿ ಪ್ರತಾಪ್ ಸಿಂಗ್, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !