ಸೋಮವಾರ, ಡಿಸೆಂಬರ್ 16, 2019
17 °C

ದೇಶಿಗೌಡನಪುರ | ಮಳೆಗೆ ನೆನೆದಿದ್ದ ಗೋಡೆ ಕುಸಿದು‌ ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ದೇಶಿಗೌಡನಪುರ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಮನೆಯ ಗೋಡೆ ಕುಸಿದು, ನಾಲ್ಕು ವರ್ಷದ ಬಾಲಕ ವೀರಭದ್ರಸ್ವಾಮಿ ಮೃತಪಟ್ಟಿದ್ದಾನೆ.

ಬಾಲಕನ ತಾಯಿ ಚನ್ನಾಜಮ್ಮ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ಮಲ್ಲೇಶ್‌ ಅಪಾಯದಿಂದ ಪಾರಾಗಿದ್ದಾರೆ.

ಈ ಕುಟುಂಬವು ತುಂಬಾ ಹಳೆಯದಾದ ನಾಡಹೆಂಚಿನ ಮನೆಯಲ್ಲಿ ವಾಸಿಸುತ್ತಿತ್ತು. ಸೋಮವಾರ ರಾತ್ರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ, ಮಣ್ಣಿನ ಗೋಡೆ ನೆನೆದಿತ್ತು. ಬೆಳಗಿನ ಜಾವ 4.30ರ ಸುಮಾರಿಗೆ ಗೋಡೆ ಕುಸಿದಿದೆ. ಗೋಡೆಯಡಿ ಸಿಲುಕಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಮಹೇಶ್‌, ಸಂತ್ರಸ್ತ ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು