ವಿದ್ಯಾರ್ಥಿ ನಿಲಯಕ್ಕೆ ಬಾಲಮಂದಿರ ಸ್ಥಳಾಂತರ

ಬುಧವಾರ, ಏಪ್ರಿಲ್ 24, 2019
32 °C
ಬಾಡಿಗೆ ಕಟ್ಟಡದಿಂದ ಗಂಗನಮಿದ್ದೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ವರ್ಗ

ವಿದ್ಯಾರ್ಥಿ ನಿಲಯಕ್ಕೆ ಬಾಲಮಂದಿರ ಸ್ಥಳಾಂತರ

Published:
Updated:
Prajavani

ಚಿಕ್ಕಬಳ್ಳಾಪುರ: ಭದ್ರತಾ ಸಿಬ್ಬಂದಿ ಯೊಬ್ಬರು ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣ ರಾಜ್ಯದಾದ್ಯಂತ ಸಂಚಲನ ಮೂಡಿಸುತ್ತಿದ್ದಂತೆ ಜಿಲ್ಲಾಡಳಿತ ನಗರದ ನಗರ್ತಪೇಟೆ ಮುಖ್ಯರಸ್ತೆಯ ಬಾಡಿಗೆ ಕಟ್ಟಡದಲ್ಲಿದ್ದ ಬಾಲಕಿಯರ ಸರ್ಕಾರಿ ಬಾಲಮಂದಿರವನ್ನು ಸುರಕ್ಷತೆಯ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಿದೆ.

ಐದು ವರ್ಷಗಳಿಂದ ಬಾಡಿಗೆ ಕಟ್ಟಡ ದಲ್ಲಿದ್ದ ಬಾಲಮಂದಿರವನ್ನು ಬುಧವಾರ ನಗರದ ಗಂಗನಮಿದ್ದೆ ರಸ್ತೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯ ಅಲ್ಪ ಸಂಖ್ಯಾ ತರ ಮೆಟ್ರಿಕ್ ನಂತರದ ಬಾಲಕಿ ಯರ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸ ಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ‘ಪ್ರಸ್ತುತ ಬಾಲಮಂದಿರ ಇದ್ದ ಪ್ರದೇಶ ಚೆನ್ನಾಗಿರಲಿಲ್ಲ. ಬಾಡಿಗೆ ಕಟ್ಟಡದಿಂದ ಅನೇಕ ಬಾಲಕಿಯರು ತಪ್ಪಿಸಿಕೊಂಡು ಹೋಗಿದ್ದಾರೆ. ಹೀಗಾಗಿ ಎಸ್ಪಿ ಅವರ ಜತೆ ಚರ್ಚಿಸಿ, ಉತ್ತಮ ಭದ್ರತಾ ವ್ಯವಸ್ಥೆ ಇರುವ ವಿದ್ಯಾರ್ಥಿ ನಿಲಯಕ್ಕೆ ಬಾಲ ಮಂದಿರ ಸ್ಥಳಾಂತರಿಸಿದ್ದೇವೆ’ ಎಂದು ಹೇಳಿದರು.

‘ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 23 ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಆ ಕಟ್ಟಡದ ಒಂದು ಭಾಗದಲ್ಲಿ ತಾತ್ಕಾಲಿ ಕವಾಗಿ ಬಾಲಮಂದಿರ ನಡೆಸಲು ಉದ್ದೇಶಿಸಿದ್ದೇವೆ. ಬಾಲಮಂದಿರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ನಗರ ವ್ಯಾಪ್ತಿ ಯಲ್ಲೇ ನಗರಾಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯದ (ಸಿಎ) ನಿವೇಶನ ಗುರುತಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಸದ್ಯ ನಾವು ₹13 ಲಕ್ಷ ನೀಡಿ ಸಿಎ ನಿವೇಶನ ಖರೀದಿಸಬೇಕಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಮುಖ್ಯ ಕಾರ್ಯದರ್ಶಿ ಅವರು ಕೂಡ ಅದಕ್ಕೆ ಅನುಮೋದನೆ ನೀಡಿದ್ದಾರೆ. ಚುನಾವಣಾ ಆಯೋಗ ಸಹ ಅನುಮೋದನೆ ನೀಡಿದರೆ ಆದಷ್ಟು ಬೇಗ ಆ ನಿವೇಶನ ಖರೀದಿಸಿ, ಮೇ ಅಂತ್ಯದಲ್ಲಿ ಬಾಲಮಂದಿರದ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ’ ಎಂದರು.

ಒಬ್ಬ ಬಾಲಕಿ ಪತ್ತೆ
ಬಾಲಮಂದಿರದಿಂದ ಕೆಲ ದಿನಗಳ ಹಿಂದೆ ಪರಾರಿಯಾಗಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಳನ್ನು ಪತ್ತೆ ಮಾಡಿರುವ ಪೊಲೀಸರು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಇನ್ನೊಬ್ಬ ಬಾಲಕಿಯ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

ಆರೋಪಿಗಳ ತೀವ್ರ ವಿಚಾರಣೆ
ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಭದ್ರತಾ ಸಿಬ್ಬಂದಿ ಭಾಗ್ಯಮ್ಮ ಮತ್ತು ಬಾಲಮಂದಿರ ಸಮೀಪದಲ್ಲಿಯೇ ವಾಸಿಸುತ್ತಿದ್ದ ಸರೋಜಮ್ಮ ಅವರನ್ನು ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಬುಧವಾರ ಇಬ್ಬರು ಆರೋಪಿಗಳನ್ನು ನಗರ್ತಪೇಟೆಯಲ್ಲಿದ್ದ ಬಾಲಮಂದಿರ ಕಟ್ಟಡಕ್ಕೆ ಕರೆತಂದ ಪೊಲೀಸರು ಮಹಜರು ನಡೆಸಿ, ಮಾಹಿತಿಯನ್ನು ಕಲೆ ಹಾಕಿದರು.

*
ಬಾಲಕಿಯರ ರಕ್ಷಣೆ ಮತ್ತು ಜನ ಬಾಲಮಂದಿರವನ್ನು ಬೇರೆ ಭಾವನೆಯಿಂದ ನೋಡುವು ದರಿಂದ ಮಕ್ಕಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಸ್ಥಳಾಂತರಿಸಿದ್ದೇವೆ.
-ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !