ಸಸ್ಯಕಾಶಿಯಲ್ಲಿ ಚಿಣ್ಣರ ಚಿಲಿಪಿಲಿ

7

ಸಸ್ಯಕಾಶಿಯಲ್ಲಿ ಚಿಣ್ಣರ ಚಿಲಿಪಿಲಿ

Published:
Updated:

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಿತ್ಯ ಹಕ್ಕಿಗಳದ್ದೇ ನಿನಾದ ಕೇಳುತ್ತಿದ್ದರೆ, ಮಂಗಳವಾರ ಉದ್ಯಾನದಲ್ಲಿ ಚಿಣ್ಣರ ಚಿಲಿಪಿಲಿ ಕೇಳುತ್ತಿತ್ತು.

ಹೊಸ ವರ್ಷದ ನಿಮಿತ್ತ ಸಿಕ್ಕ ಬಿಡುವಿನ ಸಮಯವನ್ನು ಅಪ್ಪ–ಅಮ್ಮಂದಿರ ಜತೆ ಅವರು ಉದ್ಯಾನದಲ್ಲಿ ಕಳೆದರು.

‘ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ನಿತ್ಯದ ಸರಾಸರಿಗೆ ಹೋಲಿಸಿದರೆ ದುಪ್ಪಟ್ಟಾಗಿತ್ತು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು. 

ಉದ್ಯಾನದ ಐದೂ ಕಾರಂಜಿಗಳು ಚಿಮ್ಮುತ್ತಿದ್ದವು. ಅರ್ಧ ಗಂಟೆಗೊಮ್ಮೆ ಕೆರೆ ಬಳಿಯ ಜಲಪಾತವೂ ಹರಿಯುತ್ತಿತ್ತು. ಇವುಗಳ ಬಳಿ ನಿಂತು ಸೆಲ್ಫಿ ಪ್ರಿಯರು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಹಾಡಿ ನಲಿದ ಜೋಡಿ ಹಕ್ಕಿಗಳು: ಕಬ್ಬನ್‌ ಉದ್ಯಾನದಲ್ಲಿ ಬಿದಿರಿನ ಮೆಳೆ, ಹುಲ್ಲುಹಾಸು, ಮರದ ಪೊಟರೆ ಬಳಿ... ಹೀಗೆ ಎಲ್ಲೆಂದರಲ್ಲಿ  ಜೋಡಿ ಹಕ್ಕಿಗಳು ಠಿಕಾಣಿ ಹೂಡಿದ್ದವು. ಕೆಲವರು ಕೇಕ್‌ ಕತ್ತರಿಸಿ, ಶುಭಾಶಯ ಕೋರಿ ಸಂಭ್ರಮಿಸಿದರೆ, ಇನ್ನೂ ಕೆಲವರು ಸ್ನೇಹಿತರೊಂದಿಗೆ ಹಾಡು ಹೇಳಿ, ಕುಣಿದು ಸಂತಸ ಹಂಚಿಕೊಂಡರು. 

ವಿಧಾನಸೌಧದೊಂದಿಗೆ ಸೆಲ್ಫಿ: ಸೂರ್ಯ ನೆತ್ತಿಗೇರುತ್ತಿದ್ದಂತೆ ಪ್ರಕಾಶಿಸುತ್ತಿದ್ದ ವಿಧಾನಸೌಧದ ಎದುರು ಸೆಲ್ಫಿ ಪ್ರಿಯರ ದಂಡೆ ನೆರೆದಿತ್ತು. ವಿಧಾನಸೌಧವನ್ನು ಅಪ್ಪಿಕೊಂಡಂತೆ, ಮುತ್ತಿಟ್ಟಂತೆ ಕ್ಯಾಮೆರಾ, ಮೊಬೈಲ್‌ ಕ್ಯಾಮೆರಾಗಳಿಗೆ ಬಗೆಬಗೆಯ ಫೋಸ್‌ ನೀಡುತ್ತ ಮುಖವೊಡ್ಡಿದರು. 

ಸಸ್ಯಕಾಶಿಗೆ ಭೇಟಿ ನೀಡಿದವರ ಸಂಖ್ಯೆ

ಒಟ್ಟು ; 50,000

ಮಕ್ಕಳು ; 13,000

ವಯಸ್ಕರು ; 37,000

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !