ಅಜ್ಜಿಯ ಊರಲಿ ಮಜ

7
ಮಕ್ಕಳ ಪದ್ಯ

ಅಜ್ಜಿಯ ಊರಲಿ ಮಜ

Published:
Updated:
Deccan Herald

ಬೇಸಿಗೆ ದಿನದಾಗೆ
ಅಜ್ಜಿಯ ಊರಾಗೆ
ರಜೆಯಾ ಕಳೆದು
ನಲಿವ ಮಜವೈತಿ!

ಚೆಂದಗೆ ಒಗೆದ
ಅಂಗಿಯನೆಲ್ಲ ಸೇರಿಸಿ
ಪೆಟ್ಟಿಗೆಯೊಳಗಿರಿಸಿ
ಊರಿಗೆ ಹೊರಡುವ ಪ್ಲಾನ್ ಐತಿ!

ಕಾಲುವೆ ಗುಂಟ
ನೀರಿನ ನೆಂಟ
ಗಲ-ಗಲ ಕಾಲ
ಕುಣಿಸುವ ಸೊಗಸೈತಿ

ದ್ರಾಕ್ಷಿ ತೋಟದ
ಹಣ್ಣಿನ ಗೊಂಚಲ
ಎಣಿಸುವ ಆಟದ
ಸುಂದರ ಕನಸೈತಿ

ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ನೆಗೆವ ಮೊಲದ ಗುಂಪನು
ಕದ್ದು ಕದ್ದು ನೋಡುವ
ಬಿದ್ದು ಏಳುವ ಬೆಡಗೈತಿ!

ತುಂಟರು ನಾವು
ತರಳೆಯ ಮಾಡುತ
ಅಜ್ಜಿಯ ಮೊಗದಲಿ
ನಗೆಯ ಮೂಡಿಸೋ ಮನಸೈತಿ!

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !