ಮಂಗಳವಾರ, ನವೆಂಬರ್ 19, 2019
29 °C

ಪುಟಾಣಿಗಳ ಫ್ಯಾಷನ್ ಲೋಕ

Published:
Updated:
Prajavani

ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಸೆಪ್ಟೆಂಬರ್‌ 29ರಂದು ಗ್ಲೋಬಲ್ ಕಿಡ್ಸ್ ಫ್ಯಾಷನ್ ಶೋ ಆಯೋಜಿಸಲಾಗಿದೆ.

ನಗರದ ಬಳ್ಳಾರಿ ರಸ್ತೆಯ ಫೋರ್‌ ಸೀಸನ್ಸ್‌ ಹೋಟೆಲ್‌ನಲ್ಲಿ ಈ ಶೋ ನಡೆಯಲಿದೆ. ಸಾಮುದ್ರಿಕಾ ಡಿಸೈನರ್ ಸ್ಟುಡಿಯೊ ಹಾಗೂ ರುಬಿನ್ ರಾಜ್ ಪ್ರೊಡಕ್ಷನ್‌ ಸಹಯೋಗದಲ್ಲಿ ಇದನ್ನು ಆಯೋಜಿಸಲಾಗಿದೆ. 5 ರಿಂದ 15 ವರ್ಷ ವಯೋಮಾನದ ಮಕ್ಕಳು ಇಲ್ಲಿ ಭಾಗವಹಿಸಬಹುದು.

ಅಂತರರಾಷ್ಟ್ರೀಯ ಗುಡ್‍ವಿಲ್ ರಾಯಭಾರಿ, ‘ಮಿಸ್ ಅರ್ತ್ ಯುಕೆ’ ಭವ್ಯ ಗೌಡ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ.

10 ಪ್ರಮುಖ ಫ್ಯಾಷನ್ ಡಿಸೈನರ್‌ಗಳು ಮತ್ತು ಬ್ರಾಂಡ್‌ಗಳ ರ‍್ಯಾಂಪ್‌ ನಡಿಗೆಗೆ ದೇಶದಾದ್ಯಂತ ಆಡಿಷನ್ ಮೂಲಕ 200 ಮಕ್ಕಳನ್ನು ಆಯ್ಕೆ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಮಕ್ಕಳನ್ನು ಸಹ ಪ್ಯಾಷನ್ ಪ್ರದರ್ಶನದ ಭಾಗವಾಗಿಸಲು ಇದೇ ಮೊದಲ ಬಾರಿಗೆ ದೇಶಾದ್ಯಂತ ಕೆಲವು ಸರ್ಕಾರಿ ಶಾಲೆಗಳಲ್ಲಿ ಆಡಿಷನ್‌ಗಳನ್ನು ನಡೆಸಲಾಗುವುದು. ಆಯ್ಕೆಯಾದ ಮಕ್ಕಳ ಪ್ರಯಾಣ ಮತ್ತು ವಾಸ್ತವ್ಯದ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ ಎಂದು ಸಾಮುದ್ರಿಕಾ ಡಿಸೈನರ್ ಸ್ಟುಡಿಯೋ ಕಾರ್ಯನಿರ್ವಹಣಾಧಿಕಾರಿ ಮೀನು ಸರವಣನ್ ತಿಳಿಸಿದ್ದಾರೆ.

ಷೋ ಅಂಗವಾಗಿ ಭಾನುವಾರ ಮೆಗ್ರಾತ್‌ ರಸ್ತೆಯ ಗರುಡ ಮಾಲ್‌ನಲ್ಲಿ ಆಡಿಷನ್ ನಡೆಯಿತು. ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)