ಮಕ್ಕಳ ಪದ್ಯ ‘ಕುಟ್ಟಿಂಡಿ’

7

ಮಕ್ಕಳ ಪದ್ಯ ‘ಕುಟ್ಟಿಂಡಿ’

Published:
Updated:
Prajavani

ಬಾಗೂರು ಕಲಾವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಕವಿ,ಗಾಯಕ ಬಾಗೂರು ಮಾರ್ಕಾಂಡೇಯ ಅವರು ಬರೆದಿರುವ ಪದ್ಯಗಳ ಸಂಕಲನ ‘ಕುಟ್ಟಿಂಡಿ’ಯನ್ನು ಗಾಯಕಿ ಶಮಿತಾ ಮಲ್ನಾಡ್  ಬಿಡುಗಡೆ ಮಾಡಿದರು. ಎಸ್ ಎಲ್ ಎನ್ ಪಬ್ಲಿಕೇಷನ್‍ ಈ ಕೃತಿಯನ್ನು ಹೊರತಂದಿದೆ. 

‘ಈ ಪದ್ಯಗಳನ್ನು ಓದುತ್ತಾ ನನ್ನ ಬಾಲ್ಯಕ್ಕೆ ಜಾರಿದೆ. ನಿಜಕ್ಕೂ ಮುದಗೊಡುವ ಪದ್ಯಗಳು ಮಕ್ಕಳಿಗಾಗಿ ರಚನೆ ಮಾಡಿದ ಬಾಗೂರರು ಅಭಿನಂದನಾರ್ಹರು’ ಎಂದರು. ಹಿರಿಯ ಗಾಯಕಿ ಬಿ. ಕೆ. ಸುಮಿತ್ರಮ್ಮ ಅವರು ಮಾತನಾಡಿ, ‘ಬಾಗೂರರು ಸದಭಿರುಚಿಯ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದರು.

ಬಿಡುಗಡೆಯ ಸಂದರ್ಭದಲ್ಲಿ ಕುಟ್ಟಿಂಡಿಯ ಪದ್ಯಗಳನ್ನು ಹಾಡಲಾಯಿತು. ಈ ಬಾರಿ ಬಾಗೂರು ಕಲಾವೇದಿಕೆಯ ಕಲಾಭೂಷಣ ವಾರ್ಷಿಕ ಪ್ರಶಸ್ತಿಯನ್ನು ಧಾರವಾಡದ ಕಲಾವಿದರಾದ ಎಫ್ ವ್ಹಿ. ಚಿಕ್ಕಮಠ ಅವರಿಗೆ ನೀಡಲಾಯಿತು. ಕಲಾ ಕ್ಷೇತ್ರದಲ್ಲಿ ತನ್ನದೇ ಶೈಲಿಯನ್ನು ರೂಢಿಸಿಕೊಂಡು ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ತಮ್ಮ ವಿಶೇಷ ಶೈಲಿಯ ಕಲಾಕೃತಿಯಿಂದ ಗುರುತಿಸಲ್ಪಡುವ ಇವರು ಕನ್ನಡದ ಅಪರೂಪದ ಪ್ರತಿಭೆ.

ಅತಿಥಿಯಾಗಿ ಖ್ಯಾತ ಸಂಗೀತ ನಿರ್ದೇಶಕರಾದ ಬಿ. ವಿ. ಶ್ರೀನಿವಾಸ್ ಹಾಗೂ ಬಾಗೂರು ಮಾರ್ಕಾಂಡೇಯ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !