ನಗರ ನಡುಗಿಸಿದ ಚಳಿ

7

ನಗರ ನಡುಗಿಸಿದ ಚಳಿ

Published:
Updated:

ಬೆಂಗಳೂರು: ಚುಮುಚುಮು ಚಳಿ ನಗರದ ನಿವಾಸಿಗಳ ನಡುಕವನ್ನು ಸ್ವಲ್ಪ ಹೆಚ್ಚಿಸಿದೆ. ಹಗಲು ವೇಳೆಯಲ್ಲೂ ತಣ್ಣನೆ ವಾತಾವರಣ ನಿರ್ಮಾಣವಾಗಿದ್ದು ಹಲವರು ಸ್ವೆಟರ್‌ ಧರಿಸಿಯೇ ಓಡಾಡುವ ನೋಟ ಸಾಮಾನ್ಯವಾಗಿದೆ. 

ಭಾನುವಾರ ನಗರದ ಕನಿಷ್ಠ ತಾಪಮಾನ 16 ಡಿಗ್ರಿ, ಗರಿಷ್ಠ 26 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ನಗರದ ಕೆಲವು ಭಾಗಗಳಲ್ಲಿ ಮಂಜು ಮುಸುಕಿದ, ಮೋಡ ಕವಿದ ವಾತಾವರಣ ಇದೆ. ಒಂದು ವಾರ ಕಾಲ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಿಸೆಂಬರ್‌ ಮಧ್ಯಭಾಗದಲ್ಲಿ ಚಳಿ ಸ್ವಲ್ಪ ಏರಿದೆ. ಬೆಳಿಗ್ಗೆಯೇ ತಣ್ಣನೆಯ ಹವೆ ಬೀಸುತ್ತಿದೆ. ಇದು ಜನಜೀವನದ ಮೇಲೂ ಅಲ್ಪ ಪರಿಣಾಮ ಬೀರಿದೆ. ಬೇಗ ಏಳುತ್ತಿದ್ದವರು ಬೆಚ್ಚಗೆ ಹೊದ್ದು ಮಲಗಲು ಇಷ್ಟಪಡುತ್ತಾರೆ. ಹಾಲು, ಪತ್ರಿಕೆ ವಿತರಿಸುವ ಹುಡುಗರ ಓಡಾಟವೂ ನಿಧಾನವಾಗಿಬಿಟ್ಟಿದೆ. ಉದ್ಯಾನ, ಮೈದಾನ, ನಡಿಗೆ ಪಥಗಳಲ್ಲಿ ದಪ್ಪನೆಯ ಸ್ವೆಟರ್‌ ಹೊದ್ದು ಬರುವವರೇ ಹೆಚ್ಚು ಕಾಣಸಿಗುತ್ತಿದ್ದಾರೆ. ಚಳಿಯ ನಡುವೆಯೇ ಕರ್ತವ್ಯದತ್ತ ಧಾವಿಸುವ ಕಾಯಕ ಜೀವಿಗಳಿಗೂ ಸಾವಿರಾರು ಮಂದಿ ಕಾಣ ಸಿಗುತ್ತಾರೆ. 

ಬಿಸಿ ಚಹಾ, ಕಾಫಿ, ಸಿಗರೇಟುಗಳು ಬೇಡಿಕೆ ಏರಿಸಿಕೊಂಡಿವೆ. ಸಂಜೆ ವೇಳೆಗೆ ಮದ್ಯದಂಗಡಿಗಳಿಗೆ ಹೋಗಿ ‘ಬೆಚ್ಚಗಾಗುವವರ’ ಸಂಖ್ಯೆಯೇನೂ ಕಡಿಮೆಯಿಲ್ಲ.

ಬರಹ ಇಷ್ಟವಾಯಿತೆ?

 • 22

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !