ಶಾಂತಿ ಮಾರ್ಗ: ಪಾಕ್‌ಗೆ ಚೀನಾ ಬೆಂಬಲ

7

ಶಾಂತಿ ಮಾರ್ಗ: ಪಾಕ್‌ಗೆ ಚೀನಾ ಬೆಂಬಲ

Published:
Updated:

ಬೀಜಿಂಗ್: ಭಾರತದ ಜತೆಗಿನ ವಿವಾದಗಳಿಗೆ ಸಂಬಂಧಿಸಿದಂತೆ ‘ಮಾತುಕತೆ ಮೂಲಕ ಶಾಂತಿ ಕಂಡುಕೊಳ್ಳುವ’ ಮಾರ್ಗ ಅನ್ವೇಷಿಸುತ್ತಿರುವ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಚೀನಾ ಭಾನುವಾರ ಘೋಷಿಸಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮಾತುಕತೆ ನಡೆಸಿದ ಬಳಿಕ ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ ಚೀನಾ ಈ ವಿಷಯ ಉಲ್ಲೇಖಿಸಿದೆ. 

‘ಪರಸ್ಪರ ಗೌರವ ಹಾಗೂ ಸಮಾನತೆ ಆಧಾರದ ಮೇಲೆ ಮಾತುಕತೆ, ಸಹಕಾರ, ಸಂಧಾನದ ಮೂಲಕ ಶಾಂತಿ ಸಾಧಿಸುವ, ಭಾರತದ ಜತೆಗಿನ ವಿವಾದ ಬಗೆಹರಿಸಿಕೊಳ್ಳುವ ಪಾಕಿಸ್ತಾನದ ಯತ್ನವನ್ನು ಚೀನಾ ಪ್ರಶಂಸಿಸುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಅಣ್ವಸ್ತ್ರ ಸರಬರಾಜು ಸಮೂಹದ (ಎನ್‌ಎಸ್‌ಜಿ) ಸದಸ್ಯತ್ವ ಪಡೆಯುವ ಪಾಕಿಸ್ತಾನದ ಯತ್ನಕ್ಕೂ ಬೆಂಬಲ ನೀಡುವುದಾಗಿ ಹೇಳಿದೆ. 

‘ರೇಡಿಯೊ ಫ್ರೀಕ್ವೆನ್ಸಿ ವಿಕಿರಣ ಕ್ಯಾನ್ಸರ್ ಕಾರಕವಲ್ಲ’
ಮೆಸಾಚ್ಯುಸೆಟ್ಸ್‌ (ಪಿಟಿಐ):
ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ರೇಡಿಯೊ ಫ್ರೀಕ್ವೆನ್ಸಿ ವಿಕಿರಣಗಳಿಂದ ಮನುಷ್ಯರಲ್ಲಿ ಕ್ಯಾನ್ಸರ್‌ ಉಂಟಾಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. 

ಮೊಬೈಲ್‌ ಫೋನ್‌ಗಳಿಂದ ಹೊರಹೊಮ್ಮುವ ರೀತಿಯ ರೇಡಿಯೊ ಫ್ರೀಕ್ವೆನ್ಸಿ ವಿಕಿರಣಗಳ (ಆರ್‌ಎಫ್‌ಆರ್) ಸಂಪರ್ಕಕ್ಕೆ ಬಂದ ಇಲಿಗಳಲ್ಲಿ ಕ್ಯಾನ್ಸರ್‌ ಅಂಶ ಪತ್ತೆಯಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಟಾಕ್ಸಿಕಾಲಜಿ ಕಾರ್ಯಕ್ರಮದ (ಎನ್‌ಟಿಪಿ) ಅಧ್ಯಯನ ವರದಿ ಈಚೆಗಷ್ಟೆ ತಿಳಿಸಿತ್ತು. 

ಆದರೆ, ಈ ವರದಿ ಮನುಷ್ಯರಿಗೆ ಅನ್ವಯವಾಗುವುದಿಲ್ಲ ಎಂದು ತಜ್ಞರು ಸ್ಪಷ್ಟನೆ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !