ವಿಶ್ವದ ಮೊದಲ ಡ್ರೋನ್ ಹಡಗು ನಿರ್ಮಾಣ

ಭಾನುವಾರ, ಏಪ್ರಿಲ್ 21, 2019
26 °C
ಭೂಮಿ, ವಾಯುಮಾರ್ಗದ ದಾಳಿ ಎದುರಿಸಲು ಸಮರ್ಥ: ಚೀನಾ

ವಿಶ್ವದ ಮೊದಲ ಡ್ರೋನ್ ಹಡಗು ನಿರ್ಮಾಣ

Published:
Updated:
Prajavani

ಬೀಜಿಂಗ್: ಚೀನಾ, ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಹಡಗನ್ನು ನಿರ್ಮಿಸಿ ಯಶಸ್ವಿಯಾಗಿ ಪರೀಕ್ಷೆ ಪೂರೈಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. 

ಈ ಡ್ರೋನ್ ಹಡಗು ಭೂಮಿ ಹಾಗೂ ವಾಯುಮಾರ್ಗದ ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ಚೀನಾದ ಸೇನಾತಜ್ಞರು ಹೇಳಿದ್ದಾರೆ. 

ಚೀನಾ ಹಡಗು ನಿರ್ಮಾಣ ಉದ್ದಿಮೆ ನಿಗಮದ (ಸಿಎಸ್‌ಐಸಿ) ಅಡಿಯಲ್ಲಿ ವುಚಂಗ್ ಹಡಗು ನಿರ್ಮಾಣ ಉದ್ದಿಮೆ ಸಮೂಹ ಈ ಡ್ರೋನ್ ಹಡಗು ತಯಾರಿಸಿದ್ದು, ಇದಕ್ಕೆ ಮರೈನ್ ಲಿಜರ್ಡ್ ಎಂದು ಹೆಸರಿಡಲಾಗಿದೆ. 

ವಾಯು–ಭೂಮಿ–ಸಮುದ್ರ ಮಾರ್ಗಗಳಲ್ಲಿ ಎದುರಾಗುವ ದಾಳಿಗಳನ್ನು ಸಮಗ್ರವಾಗಿ ಮತ್ತು ಮಾನವರಹಿತವಾಗಿ ನಿರ್ವಹಿಸಲು ಡ್ರೋನ್ ಹಡಗು ಸಮರ್ಥವಾಗಿದೆ ಎನ್ನುತ್ತದೆ ವರದಿ.

ಮರೈನ್ ಲಿಜರ್ಡ್ ವಿಶೇಷತೆ

* ಎರಡು ಮೆಷಿನ್ ಗನ್, ಜಲ ಮತ್ತು ವಾಯುಮಾರ್ಗದಲ್ಲಿ ಉಡಾವಣೆ ಮಾಡುವಂತಹ ಕ್ಷಿಪಣಿಗಳ ಸಂಗ್ರಹ ಮತ್ತು ಉಡಾವಣಾ ವ್ಯವಸ್ಥೆ ಮಾಡಲಾಗಿದೆ

* ಸ್ವಯಂಚಾಲಿತವಾಗಿ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅಡೆತಡೆಗಳನ್ನು ನಿವಾರಿಸಿಕೊಂಡು ಸಂಚರಿಸುವ ಸಾಮರ್ಥ್ಯ ಇದೆ

* ಕರಾವಳಿಗಳ ರಕ್ಷಣೆಗೆ ಈ ಡ್ರೋನ್ ಹಡಗು ಬಳಕೆ ಅತ್ಯುತ್ತಮವಾದುದು ಎನ್ನುವುದು ಸೇನೆಯ ನಿಲುವುಗ

ಡ್ರೋನ್ ಹಡಗಿನ ಬಗ್ಗೆ ಒಂದಿಷ್ಟು

* ಗರಿಷ್ಠ ಕಾರ್ಯನಿರ್ವಹಣಾ ವ್ಯಾಪ್ತಿ 1,200 ಕಿ.ಮೀ. 

* ಹಡಗಿನ ಉದ್ದ 12 ಮೀ.

* ನಾಟಿಕಲ್ ಗರಿಷ್ಠ ವೇಗ 50 

* ಭೂಮಿ ಮೇಲಿನ ಗರಿಷ್ಠ ವೇಗ 20 ಕಿ.ಮೀ.

*ವೆಚ್ಚ 12,34,875 ಕೋಟಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !