ಮಸೂದ್‌ ವಿಚಾರದಲ್ಲಿ ಚೀನಾ ಚಿಂತನೆ ನಡೆಸಲಿ: ಭಾರತ

ಬುಧವಾರ, ಏಪ್ರಿಲ್ 24, 2019
27 °C

ಮಸೂದ್‌ ವಿಚಾರದಲ್ಲಿ ಚೀನಾ ಚಿಂತನೆ ನಡೆಸಲಿ: ಭಾರತ

Published:
Updated:

ನ್ಯೂಯಾರ್ಕ್: ಜೈಷ್‌–ಎ– ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ಅಡ್ಡಗಾಲು ಹಾಕುವ ಮೂಲಕ ಜಗತ್ತಿಗೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂಬುದರ ಬಗ್ಗೆ ಚೀನಾ ಚಿಂತನೆ ನಡೆಸಬೇಕು ಎಂದು ಭಾರತದ ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಇಲ್ಲಿ ನಡೆದ ಏಷ್ಯಾ ಸೊಸೈಟಿಯ ಸಮಾವೇಶದಲ್ಲಿ ಮಾತನಾಡಿದ ಅವರು,‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಯ ಬಗ್ಗೆ ಭಾರತ ತಳೆದಿರುವ ನಿಲುವು ಸರಿಯಾಗಿದೆ’ ಎಂದಿದ್ದಾರೆ.

‘ಯಾವುದೇ ದೇಶದ ಸಾರ್ವಭೌಮತೆಯನ್ನು ಗೌರವಿಸುವ ಮೂಲಕ ಸಂಪರ್ಕ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಯು ಪಾಕಿಸ್ತಾನ ಆಕ್ರಮಿತ ಭಾರತದ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದು, ಈ ಪ್ರದೇಶವನ್ನು ಪಾಕಿಸ್ತಾನವು ಯೋಜನೆಗಾಗಿ ಚೀನಾದ ಸ್ವಾಧೀನಕ್ಕೆ ನೀಡಿದೆ’ ಎಂದು ಜೈಶಂಕರ್‌ ಹೇಳಿದ್ದಾರೆ.

ಮಸೂದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ಈಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಸತತ ನಾಲ್ಕನೇ ಬಾರಿಗೆ ತಡೆಯೊಡ್ಡಿತ್ತು.

ಪುಲ್ವಾಮಾದಲ್ಲಿ ಜೆಇಎಂ ಉಗ್ರ ನಡೆಸಿದ ಆತ್ಮಾಹುತಿ ದಾಳಿಯ ಬಳಿಕ ಫ್ರಾನ್ಸ್‌, ಬ್ರಿಟನ್‌ ಮತ್ತು ಅಮೆರಿಕ ವಿಶ್ವಸಂಸ್ಥೆಯಲ್ಲಿ ಈ ಪ್ರಸ್ತಾವ ಮಂಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !