‘ಬಿಆರ್‌ಐ: ಭಾರತ ತಪ್ಪಾಗಿ ಅರ್ಥೈಸಿಕೊಂಡಿದೆ’

ಶುಕ್ರವಾರ, ಏಪ್ರಿಲ್ 26, 2019
24 °C

‘ಬಿಆರ್‌ಐ: ಭಾರತ ತಪ್ಪಾಗಿ ಅರ್ಥೈಸಿಕೊಂಡಿದೆ’

Published:
Updated:

ಬೀಜಿಂಗ್: ವಲಯ ಮತ್ತು ರಸ್ತೆ ವೇದಿಕೆಯ (ಬಿಆರ್‌ಎಫ್) ಎರಡನೇ ಆವೃತ್ತಿಯ ಸಭೆಯನ್ನು ಬಹಿಷ್ಕರಿಸಲು ಭಾರತ ಮುಂದಾಗಿದೆ ಎನ್ನುವ ವರದಿಯನ್ನು ಚೀನಾ ಸೋಮವಾರ ನಿರಾಕರಿಸಿದೆ. 

‘ಒಂದು ವಲಯ ಒಂದು ರಸ್ತೆ ಯೋಜನೆಯನ್ನು (ಬಿಆರ್‌ಐ) ಭಾರತ ತಪ್ಪಾಗಿ ತಿಳಿದಿರಬಹುದು. ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ಕಾದು ನೋಡಬೇಕು’ ಎಂದು ಚೀನಾ ಸಲಹೆ ನೀಡಿದೆ. 

‘ಏಪ್ರಿಲ್ 25ರಿಂದ 27ರವರೆಗೆ ಬಿಆರ್‌ಎಫ್ ಎರಡನೇ ಆವೃತ್ತಿ ಸಭೆಯನ್ನು ನಡೆಸಲು ಯೋಚಿಸಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ರಾಷ್ಟ್ರಗಳ ಅಧಿಕಾರಿಗಳು ಮತ್ತು 40 ದೇಶಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ’ ಎಂದು ಚೀನಾ ಹೇಳಿದೆ.

‘ಬಿಆರ್‌ಐ ಆರ್ಥಿಕ ಸಹಕಾರ ಯೋಜನೆ. ಇದು ಭೌಗೋಳಿಕ ವಿವಾದಗಳಿಗೆ ಸಂಬಂಧಪಟ್ಟಿದ್ದಲ್ಲ’ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಲು ಕಾಂಗ್ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !